

ವಿಟ್ಲ: ಮಂಗಳೂರು-ಮುಡಿಪ್ಪು-ವಿಟ್ಲ ಮಧ್ಯೆ ಓಡಾಡುವ ಖಾಸಗಿ ಬಸ್ ಎರಡು ದಿನಗಳಿಂದ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರು ಬಸ್ಸನ್ನು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಖಾಸಗಿ ಬಸ್ಸಿನ ಹಿಂಭಾಗ ಎಡಬದಿಯಲ್ಲಿ ಒಂದೇ ಟಯರ್ ಇದ್ದು, ಇನ್ನೊಂದು ಚಕ್ರ ಪಂಚರ್ ಆಗಿದ್ದಲ್ಲದೆ ಸಂಪೂರ್ಣ ಹರಿದು ಹೋದ ಸ್ಥಿತಿಯಲ್ಲಿತ್ತು. ಒಡೆದ ಚಕ್ರ ಕರ್ಕಶ ಶಬ್ದ ಬರುತ್ತಿದ್ದರೂ ಚಾಲಕ, ನಿರ್ವಾಹಕ ಅದನ್ನು ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ. ಶನಿವಾರ ಮಧ್ಯಾಹ್ನದಿಂದ ಭಾನುವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು ಮಧ್ಯೆ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಾ ಪ್ರಯಾಣಿಕರ ಪ್ರಾಣದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆಂದು ಆರೋಪಿಸಿ ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಽಕಾರಿಗಳಿಗೂ ಮಾಹಿತಿ ನೀಡಿದ್ದಾರೆ.