27 ವರ್ಷಗಳಿಂದ ರಜೆ ತೆಗೆದುಕೊಳ್ಳದ ಬರ್ಗರ್ ಕಿಂಗ್ ಉದ್ಯೋಗಿ; ಆನ್‌ಲೈನ್ ದೇಣಿಗೆ ರೂಪದಲ್ಲಿ ನೌಕರನಿಗೆ ಸಿಗ್ತು 3.5 ಕೋಟಿ ರೂ. ಬಹುಮಾನ

Burger King employee who did not miss work for 27 years gets Rs 35 crore
Published on

ನವದೆಹಲಿ: 27 ವರ್ಷಗಳ ಕಾಲ ಕೆಲಸದಲ್ಲಿ ಒಂದು ದಿನವೂ ಕೆಲಸಕ್ಕೆ ರಜೆ ತೆಗೆದುಕೊಳ್ಳದಿದ್ದಕ್ಕಾಗಿ ಬರ್ಗರ್ ಕಿಂಗ್ ಕೆಲಸಗಾರನಿಗೆ ಅವನ ಕಂಪನಿ ಮತ್ತು ಸಹೋದ್ಯೋಗಿಗಳು ಬಹುಮಾನವನ್ನು ನೀಡಿ ಸನ್ಮಾನಿಸಿದ್ದಾರೆ.

ಲಾಸ್ ವೇಗಾಸ್‌ನ ಬರ್ಗರ್‌ಕಿಂಗ್​ನಲ್ಲಿ ಕೆಲಸ ಮಾಡುವ 54 ವರ್ಷದ ಕೆವಿನ್ ಫೋರ್ಟ್, 27 ವರ್ಷಗಳ ಕಾಲ ರಜೆ ತೆಗೆದುಕೊಳ್ಳದೆ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆಂದು ಕಂಪನಿ ಪ್ರಕಟಿಸಿದೆ. ಆ ರೆಸ್ಟೊರೆಂಟ್‌ನ ಮ್ಯಾನೇಜ್‌ಮೆಂಟ್ ಆತನ ಕೆಲಸಕ್ಕೆ ಪ್ರತಿಫಲ ನೀಡುವುದಾಗಿ ಘೋಷಿಸಿತು. ಕೆವಿನ್ ಫೋರ್ಡ್ ತಮ್ಮ ಸಾಮಾಜಿಕ ಮಾಧ್ಯಮ ಈ ಸಂಬಂಧಿತ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕೆವಿನ್ ಫೋರ್ಡ್ ಈ ಉಡುಗೊರೆಗಳನ್ನು ಸ್ವೀಕರಿಸಿದ್ದು ಕಳೆದ ವರ್ಷ ವೈರಲ್ ವಿಡಿಯೋ  ವ್ಯಾಪಕ ಸಾರ್ವಜನಿಕ ಗಮನವನ್ನು ಗಳಿಸಿತು.

ವೈರಲ್ ವೀಡಿಯೊದಲ್ಲಿ, ಕೆವಿನ್ ಫೋರ್ಡ್ ಅವರಿಗೆ ಉಡುಗೊರೆಯಾಗಿ ನೀಡಿದ ಪ್ಲಾಸ್ಟಿಕ್ ಚೀಲದಲ್ಲಿ, ಸಿನಿಮಾ ಟಿಕೆಟ್, ಸ್ವೀಟ್ಸ್, ಪೆನ್ನು, ಕೀಚೈನ್, ಕಪ್... ಹೀಗೆ ಕೆಲವು ವಸ್ತುಗಳು ಇದ್ದವು. ಕೆವಿನ್ ಅವರ ಪುತ್ರಿ ಸೆರೆನಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ತಂದೆಯ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ ಎಂದು ದೂರಿದ್ದಾರೆ.

ತಂದೆ 27 ವರ್ಷಗಳ ಹಿಂದೆ ಆ ಕೆಲಸಕ್ಕೆ ಸೇರಿದ್ದರು. ಕುಟುಂಬದ ಜತೆಗೆ ಕೆಲಸ ನೋಡಿಕೊಳ್ಳಲು ತಂದೆ ಒಂಟಿಯಾಗಿ ಸಾಕಷ್ಟು ಹೆಣಗಾಡಿದರು. ತಂದೆ ಕೆಲಸ ಮಾಡುವ ಕಂಪನಿಯೇ ವಿಮೆ ನೀಡುತ್ತಿದೆ ಎಂದು ತಿಳಿದ ನಂತರ ತಂದೆ ಕಳೆದ 27 ವರ್ಷಗಳಿಂದ ಒಂದೇ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ತನ್ನ ತಂದೆಗೆ ನಿಜವಾಗಿಯೂ ಅರ್ಹವಾದ ಗೌರವ ಮತ್ತು ಖ್ಯಾತಿಯನ್ನು ನೀಡಲು GoFundMe ಅಭಿಯಾನವನ್ನು ಪ್ರಾರಂಭಿಸಿದ್ದಾಳೆ.

ಈ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 4 ಲಕ್ಷ ಡಾಲರ್ (3.48 ಕೋಟಿ ರೂ.) ದೇಣಿಗೆ ಸಂಗ್ರಹವಾಗಿದೆ. ತಂದೆಗೆ ನಿಜವಾದ ಮನ್ನಣೆಯನ್ನು ನೀಡುವ ಗುರಿಯೊಂದಿಗೆ GoFundMe ಅಭಿಯಾನವನ್ನು ಪ್ರಾರಂಭಿಸಿದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net