VIDEO | ಪತ್ನಿಗೆ ಡಿಕ್ಕಿ ಹೊಡೆದ ಯುವಕನನ್ನು ಪ್ಲಾಟ್‌ಫಾರ್ಮ್‌ನಿಂದ ರೈಲ್ವೆ ಹಳಿಗೆ ತಳ್ಳಿದ; ಕಣ್ಣುಮುಚ್ಚಿ ಬಿಡುವಷ್ಟರಲ್ಲಿ ಹೋಯ್ತು ಪ್ರಾಣ

A shocking incident at Mumbais Sion Railway Station video viral
Published on

ಮುಂಬೈ: ಕೇವಲ 2 ನಿಮಿಷದ ಕೋಪ ಎಷ್ಟೋ ಜೀವಗಳನ್ನು ಹಾಳು ಮಾಡಿತು. ಮುಂಬೈನ ಸಿಯಾನ್ ರೈಲು ನಿಲ್ದಾಣದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ.

ದಂಪತಿ ಯುವಕನನ್ನು ಥಳಿಸಿ ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ತಳ್ಳಿದದ್ದಾರೆ. ಯುವಕನ ಮೇಳೆ ಚಲಿಸುತ್ತಿದ್ದ ರೈಲು ಆತನ ಮೇಳೆ ಹರಿದು ಮೃತ ಪಟ್ಟಿರುವ ಘಟನೆ ನಡೆದಿದೆ.

ನಡೆದಿದ್ದೇನು?: ಗಂಡ, ಹೆಂಡತಿ ರೈಲಿಗಾಗಿ ಕಾಯುತ್ತಿದ್ದರು. ಪತ್ನಿಗೆ ಆಕಸ್ಮಿಕವಾಗಿ ಯಾರೋ ಒಬ್ಬ ಡಿಕ್ಕಿ ಹೊಡೆದಿದ್ದಾನೆ, ಕೋಪದಲ್ಲಿ ಮಹಿಳೆ ಛತ್ರಿಯಿಂದ ಆತನಿಗೆ ಹೊಡೆದಿದ್ದಾಳೆ. ಹಿಂದಿನಿಂದ ಬಂದ ಪತಿ ಆ ಯುವಕನಿಗೆ ಕಪಾಳಮೋಕ್ಷ ಮಾಡುತ್ತಾನೆ. ಆತ ಹೊಡೆದ ರಭಸಕ್ಕೆ ಯುವಕ ಎಡವಿ ರೈಲು ಹಳಿಗಳ ಮೇಲೆ ಬೀಳುತ್ತಾನೆ. ಅವನು ಎದ್ದು ಪ್ಲಾಟ್‌ಫಾರ್ಮ್‌ ಮೇಲೆ ಬರುವಷ್ಟರಲ್ಲಿ ಟ್ರೈನ್‌ನಿಂದ ಆತನ ಮೇಲೆ ಹರಿದು ಪ್ರಾಣವನ್ನು ಕಳೆದುಕೊಳ್ಳುತ್ತಾನೆ.

ಘಟನೆ ಬಳಿಕ ಪರಾರಿಯಾಗಿದ್ದ ದಂಪತಿಯನ್ನು ಪೊಲೀಸರು ಸಿಸಿಟಿವಿ ದೃಶ್ಯವಲಿಗಳ ಸಹಾಯದಿಂದ ಬಂಧಿಸಿದ್ದಾರೆ. ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net