ವಿರಾಜಪೇಟೆ ಪುರಸಭೆಗೆ ಬಂಪರ್ ಆದಾಯ

13 vpt 1
ವಿರಾಜಪೇಟೆ ಪುರಸಭೆಯ 2025 ವ- 26 ನೇ ಸಾಲಿನ ವಾರ್ಷಿಕ ಹರಾಜು ನಡೆಯಿತು. ದೇಚಮ್ಮ , ಫಸಿಹ ತಬ್ಸುಂ, ನಾಚಪ್ಪ , ರಜನಿಕಾಂತ್ ಇದ್ದರು.
Published on

36.55 ಲಕ್ಷ ರೂ.ಗಳಿಗೆ ಮಳಿಗೆಗಳ ಹರಾಜು

ವಿರಾಜಪೇಟೆ : ಪುರಸಭೆಯು 2025- 26ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ 36,55,500 ರೂ. ಆದಾಯ ಗಳಿಸಿದೆ.

ಗುರುವಾರ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಅಧ್ಯಕ್ಷತೆಯಲ್ಲಿ ನಡೆದ ವಿರಾಜಪೇಟೆ ಪುರಸಭೆಯ 2025-26ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ ಈ ಬಾರಿ 36,55,500 ರೂ.ಗಳ ಲಾಭ ಪಡೆದಿದೆ. ಸಮುದ್ರ ಮೀನಿನ ಮಳಿಗೆಗಳ ಹರಾಜಿನಲ್ಲಿ ಪುರಸಭೆಗೆ ಕಳೆದ ಸಾಲಿಗಿಂದ ಈ ಬಾರಿ ಹೆಚ್ಚು ಲಾಭ ಬಂದಿದೆ. ಹಿಂದಿನ ಸಾಲಿನಲ್ಲಿ ಒಟ್ಟು 18,11,500 ರೂ. ಆದಾಯ ಬಂದಿತ್ತು. ಈ ಬಾರಿ 18,44,000 ರೂ. ಗಳಿಸಿದೆ.

ವಾಹನ ಶುಲ್ಕ ಎತ್ತುವಳಿಯಲ್ಲಿ 2,93,000 ರೂ., ಸಂತೆ ಎತ್ತಾವಳಿ 3,44,000 ರೂ., 1ನೇ ಮೀನು ಮಳಿಗೆ 7,03,500 ರೂ., 2ನೇ ಮೀನು ಮಳಿಗೆ 81,000 ರೂ., 3ನೇ ಮೀನು ಮಳಿಗೆ 6,91,000 ರೂ. 4ನೇ ಮೀನು ಮಳಿಗೆ 5,02,500 ರೂ ಸೇರಿದಂತೆ ಒಟ್ಟು 26,98, 000 ರೂ.ಗಳಿಗೆ ಹರಾಜಾಯಿತು. ಕೋಳಿ ಮಳಿಗೆ 10 ರಲ್ಲಿ 76,000 ರೂ., ಕೋಳಿ ಮಳಿಗೆ 11 ರಲ್ಲಿ 1,51,000 ರೂ., ಕೋಳಿ ಮಳಿಗೆ 5 ರಲ್ಲಿ 93,000 ರೂ. ಸೇರಿ ಒಟ್ಟು 3,20,000 ರೂ. ಆದಾಯ ಲಭಿಸಿದೆ. ಕುರಿ ಮಾಂಸದ 2 ಮಳಿಗೆಯಲ್ಲಿ ಒಟ್ಟು 1, 93,000 ರೂ. ಆದಾಯ ಬಂದಿದೆ.

ಹಂದಿ ಮಾಂಸದ ಮೂರು ಮಳಿಗೆ ಹರಾಜಿನಲ್ಲಿ ನಿರೀಕ್ಷಿತ ಆದಾಯ ಬಾರದ ಹಿನ್ನೆಲೆಯಲ್ಲಿ ಹರಾಜು ಮುಂದೂಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಮಾಹಿತಿ ನೀಡಿದರು.

ವರ್ತಕರ ಪರವಾಗಿ ಸಲೀಂ ಮಾತನಾಡಿ, ಹೈಟೆಕ್ ಮೀನು, ಮಾಂಸ ಮಾರುಕಟ್ಟೆ ಎಂಬ ಹೆಸರಿಗೆ ಮಾತ್ರ. ಅಲ್ಲಿ ಕನಿಷ್ಠ ಮೂಲಸೌಕರ್ಯ ಇಲ್ಲ, ಪ್ರತಿ ಹರಾಜಿನಲ್ಲಿ ನಮಗೆ ಭರವಸೆ ಮಾತ್ರ ಸಿಗುತ್ತಿದೆ. ಶೌಚಗೃಹ ದುಸ್ಥಿತಿಯಲ್ಲಿದ್ದು ಬಳಕೆಗೆ ಯೋಗ್ಯವಾಗಿಲ್ಲ. ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಶೀತಲೀಕರಣ ಯಂತ್ರ ಕೆಟ್ಟು ಮೂಲೆ ಸೇರಿದೆ. ಹೊಸ ಚರಂಡಿ ಮಾಡಿ ಸ್ಲ್ಯಾಬ್ ಹಾಕಲಾಗಿದ್ದು, ಅದು ಎತ್ತರ ಇರುವ ಕಾರಣ ವಾಹನ ನಿಲುಗಡೆ ಸಾಧ್ಯವಿಲ್ಲ ಎಂದು ದೂರಿದರು.

ಅದೇ ರೀತಿ ವರ್ತಕರಿಂದ ಮೂರ್ನಾಡು ರಸ್ತೆಯ ಹಂದಿ ಮಳಿಗೆಯ ದುಸ್ಥಿತಿಯ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಫಸಿಹತಬ್ಸುಂ, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net