

ಬೆಂಗಳೂರು: ದಿಗ್ವಿಜಯ 24*7 ನ್ಯೂಸ್ ಸುದ್ದಿವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ನಡೆದ ಲಕ್ ಲಕ್ಷ್ಮೀ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಿಂಪಲ್ ಪ್ರಶ್ನೆಗೆ ಸೂಕ್ತ ಉತ್ತರ ನೀಡಿ ಒಬ್ಬರು 5 ಸಾವಿರ ರೂ. ಬಂಪರ್ ಬಹುಮಾನ ಗೆದ್ದರೆ, ಉಳಿದ ನಾಲ್ವರು ಮಹಿಳೆಯರು 2 ಸಾವಿರ ರೂ. ಅನ್ನು ತಮ್ಮದಾಗಿಸಿಕೊಂಡರು.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ಲಕ್ ಲಕ್ಷ್ಮೀಯರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ನಟಿ ಕಾವ್ಯ ಶಾ ಭಾಗಿಯಾಗಿದ್ದರು. ಕರೆ ಮಾಡಿದವರ ಜತೆ ಮಾತನಾಡಿ, ದಿಗ್ವಿಜಯ ವಾಹಿನಿಯ ಹೊಸತನದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟದ ಹಾದಿ, ವಿಶೇಷತೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಸಾವಿರಾರು ಕರೆಗಳು ಬಂದವು. ದಿವ್ಯಾ ದಾವಣಗೆರೆ- ಸ್ವಾತಂತ್ರ್ಯ ದಿನ ಬಂಪರ್ ಕ್ಯಾಷ್ 5 ಸಾವಿರ ರೂ. ನಗದು ಬಹುಮಾನ ಪಡೆದ ಲಕ್ ಲಕ್ಷ್ಮೀ!
ವಿಜಯವಾಣಿ ಓದುವ ಹಾಗೂ ದಿಗ್ವಿಜಯ ವೀಕ್ಷಿಸುವ ಮಹಿಳೆಯರಿಗೆ ಮನೆಯಲ್ಲಿದ್ದುಕೊಂಡೇ ನಗದು ಗೆಲ್ಲುವ ಅವಕಾಶ ಕಲ್ಪಿಸಿ ಕೊಡಲಾಗಿದೆ. ಈವರೆಗೆ ಕಾರ್ಯಕ್ರಮಕ್ಕೆ ಸಾವಿರಾರು ಕರೆಗಳು ಬಂದಿದ್ದು, ಪ್ರತಿವಾರ 4ರಿಂದ 10 ಮಂದಿ ನಗದು ಬಹುಮಾನ ಗೆಲ್ಲುತ್ತಿದ್ದಾರೆ. ನೀವೂ ವಿಜಯವಾಣಿ ಪತ್ರಿಕೆ ಓದುಗರಾಗಿದ್ದು, ದಿಗ್ವಿಜಯ ನ್ಯೂಸ್ ಚಾನಲ್ ವೀಕ್ಷಕರಾಗಿದ್ದರೆ ವಾರಾಂತ್ಯದ ಶನಿವಾರ, ಭಾನುವಾರ ಮಧ್ಯಾಹ್ನ 2.27ಕ್ಕೆ ನಡೆಯುವ ನೇರಪ್ರಸಾರ ಕಾರ್ಯಕ್ರಮಕ್ಕೆ ಕರೆ ಮಾಡಿ, ಲಕ್ ಲಕ್ಷ್ಮೀ ಕೇಳುವ ಸರಳ ಪ್ರಶ್ನೆಗೆ ಉತ್ತರಿಸಿ ನಗದು ಬಹುಮಾನ ಗೆದ್ದು ಲಕ್ ಲಕ್ಷ್ಮೀ ಆಗಬಹುದು.
ಶನಿವಾರದ ವಿಜೇತರು: ಶ್ವೇತಾ-ಕನಕಪುರ, ಮಮತಾ-ಮೈಸೂರು, ಸೌಭಾಗ್ಯ-ಮೈಸೂರು, ಅಂಜಲಿ-ಬಾಗಲಕೋಟೆ. ಭಾನುವಾರದ ವಿಜೇತೆ: ದಿವ್ಯಾ- ದಾವಣಗೆರೆ