ಭೌತಿಕ ತಳಹದಿಯಲ್ಲಿ ಭಾರತ ನಿರ್ಮಾಣ

02CHR01
ಚೌಳಹಿರಿಯೂರಿನಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಎಚ್.ಎಸ್.ಶಿವಮೂರ್ತಯ್ಯ, ಎಚ್.ಬಿ.ಚಂದ್ರಪ್ಪ, ಲಲಿತಾ ನಟೇಶ್ ಉದ್ಘಾಟಿಸಿದರು.
Published on

ಚೌಳಹಿರಿಯೂರು: ಭೌತಿಕ, ಸಾಮಾಜಿಕ ತಳಹದಿಯಲ್ಲಿ ಭಾರತ ನಿರ್ಮಾಣವಾಗಿದೆ ಎಂದು ಉಪನ್ಯಾಸಕ ವೈ.ಕೆ.ಪ್ರಹ್ಲಾದ್ ಹೇಳಿದರು.
ಡಾ.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ದೇವ ನಿರ್ಮಿತ ರಾಷ್ಟ್ರ. ನಮ್ಮಲ್ಲಿರುವ ಗಂಗಾ ನದಿ ನೀರನ್ನು ಜನರು ತೀರ್ಥ ಎಂದು ಭಾವಿಸಿದ್ದಾರೆ. ಗಿರಿ, ಪರ್ವತ, ಮಳೆ, ಗಾಳಿ, ಭೂಮಿ, ಸೂರ್ಯ, ಚಂದ್ರ, ಪ್ರಕೃತಿಯನ್ನು ಪೂಜಿಸುವ ಪದ್ದತಿ ಹಾಗೂ ಆಚರಣೆ ಭಾರತದಲ್ಲಿ ಮಾತ್ರ ಇದೆ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, 1987ರಲ್ಲಿ ಸುತ್ತೂರು ಶ್ರೀಗಳು ಶರಣ ಸಾಹಿತ್ಯ ಪರಿಷತ್ ಆರಂಭಿಸಿದರು. 1994ರಲ್ಲಿ ಚೌಳಹಿರಿಯೂರಿನಲ್ಲಿ ಪ್ರಥಮವಾಗಿ ಕಾರ್ಯಕ್ರಮ ನಡೆಯಿತು. ಇತ್ತಿಚೆಗೆ ಪ್ರತಿ ಹಳ್ಳಿಗಳಲ್ಲೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸೆ.13 ರಂದು ಕುರುಬರಹಳ್ಳಿಯಲ್ಲಿ ಸಾಣೇಹಳ್ಳಿ ಶ್ರೀ ಡಾ.ಪಂಡಿತರಾದ್ಯ ಶಿವಚಾರ್ಯ ಸ್ವಾಮೀಜಿ ಹಾಗೂ ಕಡೂರು ಯಳನಾಡು ಮಠದ ಶ್ರೀಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ಜಿ.ಅಶೋಕ್‌ಕುಮಾರ್ ಮಾತನಾಡಿ, ಸಾತ್ವಿಕ ಆಹಾರ ಸೇವನೆ, ಶಿವಶರಣರ ತಾತ್ವಿಕ ನಡೆ-ನುಡಿ ಹಾಗೂ ಶರಣರ ಸಂದೇಶಗಳು ಇಂದಿಗೂ ಅನುಕರಣಿಯ ಎಂದರು.
ಎಚ್.ಎಸ್.ಶಿವಮೂರ್ತಯ್ಯ, ಗಾಡಿ ಚಂದ್ರಪ್ಪ, ಲಲಿತಾ ನಟೇಶ್, ಮಲ್ಲಿಕಾರ್ಜುನ್, ಧನರಾಜ್, ಎಚ್.ಎಮ್.ಅನಿಲ್‌ಕುಮಾರ್, ಜಿ.ಬಿ.ಓಂಕಾರಪ್ಪ, ಎಚ್.ಬಿ.ಚಂದ್ರಪ್ಪ, ಬಿ.ಆರ್.ನಟೇಶ್, ಬಿ.ಜೆ.ಸತೀಶ್, ಶಿವಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net