ಮಹಾರಾಷ್ಟ್ರದಲ್ಲಿ​ ಕಟ್ಟಡ ಕುಸಿತ : 14 ಕ್ಕೇರಿದ ಸಾವಿನ ಸಂಖ್ಯೆ! ಎನ್​ಡಿಆರ್​ಎಫ್​ ತಂಡದಿಂದ ತುರ್ತು ಕಾರ್ಯಾಚರಣೆ | Building Collapse

untitled-design-2025-08-28t113822850-68aff261da6fb
Published on

Building Collapse: ಮಹಾರಾಷ್ಟ್ರದ ಪಾಲ್ವಾರ್​ ಜಿಲ್ಲೆಯ ವಿರಾರ್​ ಪ್ರದೇಶದಲ್ಲಿ ಕಟ್ಟಡ ಕುಸಿದು ಬಿದ್ದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಗುರುವಾರ (ಆಗಸ್ಟ್​ 28) ಘೋಷಿಸಿದ್ದಾರೆ. ಈ ಪ್ರದೇಶಗಳಲ್ಲಿ ಎನ್​ಡಿಆರ್​ಎಫ್​ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗೋಡೆ ಕೆಳಗೆ ಸಿಲುಕಿಕೊಂಡ ಇಬ್ಬರನ್ನು ರಕ್ಷಿಸಿದ್ದು, ಒಬ್ಬರು ಗಾಯಗೊಂಡಿದ್ದರೆ ಎಂದು ವರದಿ ಬಂದಿದೆ.

ಘಟನೆ ಏನು?

ಪಾಲ್ವರ್​ ಜಿಲ್ಲೆಯ ವಿರಾರ್​ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ರಮಾಬಾಯಿ ಅಪಾರ್ಟ್​ಮೆಂಟ್​ನ ಒಂದು ಭಾಗ ತಡರಾತ್ರಿ ಕುಸಿದು ಬಿದ್ದಿದ್ದು, ಈವರೆಗೂ 14 ಜನ ಸಾವನ್ನಪ್ಪಿರುವುದಾಗಿ ತಿಳಿದಿದೆ. ಇನ್ನು ಎನ್​ಡಿಆರ್​ಎಫ್​ನ​ ಎರಡು ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಗೋಡೆಯ ಕೆಳಗೆ ಸಿಲುಕಿಕೊಂಡವರಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಪೊಲಿಸರು ಸೇರಿದಂತೆ ತುರ್ತು ಸೇವೆಗಳು ಎನ್​ಡಿಆರ್​ಎಫ್​ ತಂಡಗಳೊಂದಿಗೆ ಸಕ್ರಿಯವಾಗಿ ತೊಡಗಿಕೊಂಡಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಬ್ಯಾರಿಕೇಡ್​ಗಳನ್ನು ನಿರ್ಮಿಸಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಕಟ್ಟಡದ ನಿವಾಸಿಗಳನ್ನು ಬೇರೆ ಕಡೆ ಸ್ಥಳಾಂತರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net