ವಿಧಾನಸೌಧ ಆವರಣದಲ್ಲೇ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಿಸಿ: ಗಂಗಾಮತಸ್ಥರ ಆಗ್ರಹ

Ambigara chowdaiah
Published on

ಬೆಂಗಳೂರು ಮುಂದಿನ ಒಂದು ವರ್ಷದಲ್ಲಿ ವಿಧಾನಸೌಧದ ಆವರಣದಲ್ಲಿಯೇ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣ ಮಾಡಬೇಕು. ಬೇರೆ ಯಾವುದೇ ಸ್ಥಳದಲ್ಲಿ ಬೇಡವೆಂದು ಹಾವೇರಿ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಆಗ್ರಹಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಗೆಯೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಭರವಸೆ ನೀಡಿದ್ದಾರೆ. ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಾರಸು ಮಾಡುವ ಕಾರ್ಯವು ಬಹಳ ವೇಗವಾಗಿ ನಡೆಯಬೇಕು ಎಂದು ಮನವಿ ಮಾಡಿದರು.

ಇಲ್ಲಿಯವರೆಗೂ ಅಂಬಿಗರ ಚೌಡಯ್ಯನವರು ರಚಿಸಿರುವ 330 ವಚನಗಳು ದೊರೆತಿವೆ. ಇನ್ನೂ ಸಂಶೋಧನಾ ಕೆಲಸ ನಡೆಯುತ್ತಿದ್ದು, ಮತ್ತುಷ್ಟು ದೊರೆಯಬಹುದು. ಅವರ ಎಲ್ಲ ವಚನಗಳನ್ನು ಸರ್ಕಾರವೇ ಮುದ್ರಿಸಿ ಹಂಚಿಕೆ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net