ಬೆಂಗಳೂರು:
ಬಜೆಟ್ ಯೋಜನೆಗಳನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ವಿಕಾಸಸೌಧಲ್ಲಿ ಮಂಗಳವಾರ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಈಗ ಆಬೇಕಾಗಿರುವ ಕೆಲಸಗಳು, ಬಾಕಿ ಇರುವ ಕೆಲಸಗಳು ಸೇರಿದಂತೆ
ಸಮಗ್ರವಾಗಿ ವಿಶ್ಲೇಷಣೆ ನಡೆಸಿದ ಸಚಿವರು, ವೈದ್ಯಕೀಯ ಶಿಕ್ಷಣ ಇಲಾಖೆಯಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಮುಂದಿನ ಸಭೆಯಲ್ಲಿ ನಿಖರ ಮಾಹಿತಿ ಮತ್ತು ಆಗಿರುವ ಪ್ರಗತಿಯ ದಾಖಲೆ ಸಹಿತ ಬರುವಂತೆ ತಿಳಿಸಿದರು.
ಇಲಾಖೆ ಕಾರ್ಯದರ್ಶಿ ಮೊಹಮದ್ ಮೊಶಿನ್, ನಿರ್ದೇಶಕಿ ಡಾ.ಸುಜತಾ ರಾಥೋಡ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇಡಿ ಎಚ್.ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.