

ಭದ್ರಾವತಿ: ಜನ್ನಾಪುರದಲ್ಲಿ ಎರಡು ಮನೆಗಳ ಗೋಡೆ ಮಧ್ಯದಲ್ಲಿರುವ ಚರಂಡಿಗೆ ಬಿದ್ದು ಸಿಕ್ಕಿಹಾಕಿಕೊಂಡಿದ್ದ ಎಮ್ಮೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಎಮ್ಮೆ ಚರಂಡಿಗೆ ಬಿದ್ದಿರುವುದನ್ನು ಗಮನಿಸಿದ ನಾಗರಿಕರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಒಂದು ತಾಸು ಕಾರ್ಯಾಚರಣೆ ನಡೆಸಿ ಎಮ್ಮೆಯನ್ನು ರಕ್ಷಿಸಿದರು.
ಅಗ್ನಿಶಾಮಕ ಠಾಣಾಧಿಕಾರಿ ಎನ್.ವಸಂತಕುಮಾರ್, ಸಿಬ್ಬಂದಿ ಆನಂದ, ಸುರೇಶ್, ರಾಜಾನಾಯ್ಕ, ಸಂತೋಷ್, ಸಿದ್ದಪ್ಪ ಹಾಗೂ ಪೌರಕಾರ್ಮಿಕರು ಪಾಲ್ಗೊಂಡಿದ್ದರು.