

ಅಥಣಿ: ಎಣ್ಣೆ ಖರೀದಿಸಲು ವ್ಯಕ್ತಿಯೊಬ್ಬ ಎಮ್ಮೆ ಸಮೇತ ಸಾಲಿನಲ್ಲಿ ನಿಂತು ಎಲ್ಲರನ್ನು ಅಚ್ಚರಿಗೊಳಿಸಿದರು.
ಅಥಣಿ ಪಟ್ಟದ ಮದ್ಯದ ಅಂಗಡಿ ಬಳಿ ಬೆಳಗ್ಗೆ 9.30ರ ವೇಳೆಗೆ ವ್ಯಕ್ತಿಯೊಬ್ಬರು ಎಮ್ಮೆ ಜತೆ ಆಗಮಿಸಿ ಸಾಲಿನಲ್ಲಿ ನಿಂತರು. ಇದನ್ನು ನೋಡಿ ಅಲ್ಲಿದ್ದವರು ಬೆರೆಗಾದರು.
ಎಮ್ಮೆ ಮೇಯಿಸಲು ಈಗ ಹೋದರೆ ಬರುವುದು ಸಂಜೆ ಆಗುತ್ತದೆ. ಆ ವೇಳೆಗೆ ಮದ್ಯ ಖಾಲಿ ಆಗಬಹುದು ಎಂದು ಎಮ್ಮೆಯೊಂದಿಗೆ ಸಾಲಿನಲ್ಲಿ ನಿಲ್ಲಲು ಬಂದಿದ್ದೇನೆ ಎಂದು ಅವರು ಹೇಳಿದರು. ಮದ್ಯ ಖರೀದಿಸಿ ನಂತರ ಅಲ್ಲಿಂದ ತೆರಳಿದರು. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ ಹಾಸನದಲ್ಲಿ ಮದ್ಯಕ್ಕಾಗಿ ಮೈಲುದ್ದ ಸಾಲು