

ಹಾಸನ: ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಖುಷಿಗೊಂಡ ಮದ್ಯಪ್ರಿಯರು ಸೋಮವಾರ ಬೆಳಗಿನ ಜಾವದಿಂದಲೇ ಜಿಲ್ಲೆಯ ವಿವಿಧೆಡೆ ಮದ್ಯದಂಗಡಿಗಳ ಮುಂದೆ ಮೈಲುದ್ದ ಸಾಲಾಗಿ ನಿಂತಿದ್ದರು. ಜಾವಗಲ್ ಪಟ್ಟಣದ ಎಂಎಸ್ಐಎಲ್ ಅಂಗಡಿ ಮುಂದೆ ಬೆಳಗ್ಗೆ 4ರಿಂದಲೇ 1 ಕಿಮೀ ದೂರದಿಂದಲೇ ಸಾಲುಗಟ್ಟಿ ಬಂದು ಮದ್ಯ ಖರೀದಿಸಿದರು.
ಕೋವಿಡ್-19 ಲಾಕ್ಡೌನ್ನಿಂದಾಗಿ ಮದ್ಯಮಾರಾಟ ಸ್ಥಗಿತಗೊಂಡಿದ್ದರಿಂದ ಕಂಗಾಲಾಗಿದ್ದ ಎಣ್ಣೆಪ್ರಿಯರು, ಮದ್ಯ ಕುಡಿಯದೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಈಗ ಅಂಗಡಿ ಓಪನ್ ಆಗಿದ್ದರಿಂದ ಖುಷಿಯಾಗಿದೆ ಎಂದು ಮದ್ಯದ ಪ್ಯಾಕೇಟ್ ಹಿಡಿದು ಸಂಭ್ರಮಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು. ಇನ್ನು ಹಾಸನ ನಗರದ ಹಲವೆಡೆ ಸಾಮಾಜಿಕ ಅಂತರ ಮರೆತ ಜನತೆ ಮದ್ಯ ಖರೀದಿಸಲು ಮುಗಿಬಿದ್ದಿದ್ದರು.
ಇದನ್ನೂ ಓದಿ ಮಂಡ್ಯದಲ್ಲಿ ಮದ್ಯಕ್ಕಾಗಿ ಓಡಿ ಬಂದ “ಎಣ್ಣೆ”ಪ್ರಿಯರು