

ದಷ್ಟಪುಷ್ಟ ಎಮ್ಮೆಯೊಂದು ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡಿರುವ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಸಂಭಾಲ್ನಲ್ಲಿನ ಠಾಣೆಯ ಆವರಣದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ತಮ್ಮ ಬೈಕ್ನಲ್ಲಿ ಠಾಣೆಯ ದ್ವಾರ ಪ್ರವೇಶಿಸುತ್ತಿದ್ದರು. ಅಷ್ಟರಲ್ಲಿ ಅಲ್ಲಿಯೇ ಇದ್ದ ದೊಡ್ಡ ಎಮ್ಮೆ ಓಡಿಬಂದು ಅವರ ಬೈಕ್ಗೆ ಗುದ್ದಿದೆ. ಕೆಳಗೆ ಬಿದ್ದ ಪೊಲೀಸ್ ಅಧಿಕಾರಿಯನ್ನು ಸ್ವಲ್ಪ ದೂರ ರೋಡ್ನಲ್ಲಿಯೇ ಎಳೆದುಕೊಂಡು ಹೋಗಿದೆ. ಅಷ್ಟರಲ್ಲಿ ಗುಲಾಬಿ ಬಣ್ಣದ ಅಂಗಿ ಹಾಕಿಕೊಂಡವನೊಬ್ಬ ಬಂದು ಎಮ್ಮೆಯನ್ನು ಅಲ್ಲಿಂದ ಓಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಮುಗಿಸಿಬಿಡ್ತೀನಿ ಅಂತ ಸುಶಾಂತ್ಗೆ ಧಮ್ಕಿ ಹಾಕಿದ ಸ್ಟಾರ್ ಯಾರು?
ಈ ಎಮ್ಮೆಗೆ ಅದೇನಾಗಿತ್ತೋ ಗೊತ್ತಿಲ್ಲ...ತುಂಬ ರೊಚ್ಚಿಗೆದ್ದಿತ್ತು. ಪೊಲೀಸ್ ಅಧಿಕಾರಿಯ ಮೇಲೆ ದಾಳಿ ಮಾಡುವ ಮುನ್ನ, ಕೆಲವು ವಾಹನಗಳನ್ನೂ ಧ್ವಂಸ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಎಮ್ಮೆಯಿಂದ ದಾಳಿಗೆ ಒಳಗಾದ ಪೊಲೀಸ್ ಅಧಿಕಾರಿ ಎಎನ್ಐ ಜತೆ ಮಾತನಾಡಿದ್ದು, ತಮಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದಿದ್ದಾರೆ. (ಏಜೆನ್ಸೀಸ್)