ಮುಖ್ಯಮಂತ್ರಿಗೆ ಧನ್ಯವಾದ ಹೇಳಲು ಕಾಯ್ದಿದ್ದ ಶಾಸಕರು

siddu
Published on

ಬೆಂಗಳೂರು:
ಬಜೆಟ್ ಮಂಡನೆ ಮಾಡಿ ಸದನದಿಂದ ಹೊರಗೆ ಬರುವ ಹೊತ್ತಿನಲ್ಲಿ ಹಲವು ಶಾಸಕರು ಮತ್ತು ಸಚಿವರು ಕಾಯ್ದು ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ನಮ್ಮ ಕ್ಷೇತ್ರದ ಬೇಡಿಕೆಗೆ ಸ್ಪಂಧಿಸಿದ್ದೀರಿ ಎಂದು ಕೆಲ ಶಾಸಕರು ಹೇಳಿದರೆ, ನಾವು ಕೇಳಿದ್ದರಲ್ಲಿ ಕೆಲವನ್ನು ಬಜೆಟ್‌ನಲ್ಲಿಯೇ ಸೇರಿಸಿದ್ದೀರಿ ಎಂದು ಸಿಎಂಗೆ ಅಭಿಮಾನದ ಮಾತುಗಳನ್ನು ಹೇಳಿದ್ದಲ್ಲದೆ, ಅವರ ಕಾಲಿಗೆರಗಿದರು. ಶಾಸಕರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಕೂಡ ಸೇರಿದ್ದರು. ಅವರು ಸಿಎಂಗೆ ವಿಶೇಷ ಧನ್ಯವಾದ ತಿಳಿಸಿದರು.
ಸಚಿವರಾದ ಚಲುವರಾಯಸ್ವಾಮಿ, ಮಧು ಬಂಗಾರಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದರು.
ವಿಧಾನಸೌಧದಿಂದ ಆಚೆಗೆ ಹೋಗುವ ಸಂದರ್ಭದಲ್ಲಿ ಹಲವು ಸಮಾಜದ ನಾಯಕರು, ಮುಖಂಡರು, ತಮ್ಮ ಬೇಡಿಕೆ ಈಡೇರಿಸಿದ್ದೀರಿ ಎಂದು ಮುಖ್ಯಮಂತ್ರಿಗೆ ಧನ್ಯವಾದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net