Budget 2025 | ಬಜೆಟ್‌ನಲ್ಲಿ ಯಾವುದು ಅಗ್ಗ & ಯಾವುದು ದುಬಾರಿ; ಇಲ್ಲಿದೆ ಸಂಪೂರ್ಣ ಮಾಹಿತಿ

Untitled design (88)
Published on

ನವದೆಹಲಿ: ಪ್ರಧಾನಿ ಮೋದಿ ಸರ್ಕಾರದ 3.0ರ ಮೊದಲ ಪೂರ್ಣಾವಧಿಯ ಬಜೆಟ್(Budget 2025) ಅನ್ನು ಸಂಸತ್ತಿನಲ್ಲಿ ಶನಿವಾರ (ಫೆಬ್ರವರಿ 1) ಮಂಡಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಈ ಬಾರಿಯ ಬಜೆಟ್ ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದು ಈ ಮೊದಲೆ ಪ್ರಧಾನಿ ಮೋದಿ ಸೂಚಿಸಿದ್ದರು.

ಅದರಂತೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ತಮ್ಮ ಬಜೆಟ್ ಭಾಷಣದಲ್ಲಿ ಅಗತ್ಯ ಔಷಧಿಗಳನ್ನು ಸೇರಿದಂತೆ ಹಲವು ವಿಷಯಗಳನ್ನು ಅಗ್ಗವಾಗಿ ಮಾಡಿದ್ದಾರೆ. ವಿತ್ತ ಸಚಿವರು 36 ಜೀವ ರಕ್ಷಕ ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ತೆಗೆದುಹಾಕಿದ್ದಾರೆ. ಬಜೆಟ್‌ನಲ್ಲಿ ಯಾವುದು ದುಬಾರಿಯಾಯಿತು ಮತ್ತು ಯಾವುದು ಅಗ್ಗವಾಯಿತು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಅಗ್ಗದ ವಸ್ತುಗಳು ಯಾವುದು?

  • 36 ಕ್ಯಾನ್ಸರ್ ಔಷಧಿಗಳು
  • ವೈದ್ಯಕೀಯ ಉಪಕರಣಗಳು
  • ಎಲ್ಇಡಿ ಕೈಗೆಟುಕುವ ಬೆಲೆ
  • ಭಾರತದಲ್ಲಿ ತಯಾರಿಸಿದ ಬಟ್ಟೆಗಳು
  • ಮೊಬೈಲ್ ಫೋನ್ ಬ್ಯಾಟರಿ
  • 82 ಸರಕುಗಳಿಂದ ಸೆಸ್ ತೆಗೆದುಹಾಕಲಾಗಿದೆ
  • ಕ್ರಸ್ಟ್ ಲೆದರ್​​​ ಜಾಕೆಟ್
  • ಶೂಗಳು
  • ಬೆಲ್ಟ್
  • ಪರ್ಸ್
  • EV ವಾಹನ
  • ಎಲ್​ಸಿಡಿ
  • ಎಲ್ಇಡಿ ಟಿವಿ
  • ಕೈಮಗ್ಗ ಬಟ್ಟೆಗಳು

ದುಬಾರಿ ಆಗಿದ್ದೇನು?

  • ಫ್ಲಾಟ್ ಪ್ಯಾನಲ್ ಡಿಸ್ಪ್ಲೇ: ಫ್ಲಾಟ್ ಪ್ಯಾನೆಲ್ ಡಿಸ್ಪ್ಲೇ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 10 ರಿಂದ ಶೇಕಡಾ 20ಕ್ಕೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.
  • ಹೆಣೆದ ಬಟ್ಟೆಗಳು; ಹೆಣೆದ ಬಟ್ಟೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವು ಪ್ರತಿ ಕೆಜಿಗೆ 10/20 ರಿಂದ 20 ಅಥವಾ 115 ರೂಪಾಯಿಗೆ ಹೆಚ್ಚಾಗುತ್ತದೆ.

ಇದಲ್ಲದೆ 12 ಅಗತ್ಯ ಖನಿಜಗಳು ಮತ್ತು ಹಡಗು ತಯಾರಿಕೆಗೆ ಕಚ್ಚಾ ವಸ್ತುಗಳ ಕಸ್ಟಮ್ ಸುಂಕದ ಮೇಲಿನ ವಿನಾಯಿತಿಯನ್ನು ಮುಂದಿನ 10 ವರ್ಷಗಳವರೆಗೆ ವಿಸ್ತರಿಸಲಾಗಿದೆ. ಕೋಬಾಲ್ಟ್ ಉತ್ಪನ್ನಗಳನ್ನು (ಇದರಿಂದ ಲಿಥಿಯಂ ಬ್ಯಾಟರಿಗಳು ಮತ್ತು ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳನ್ನು ತಯಾರಿಸಲಾಗುತ್ತದೆ) ಸಹ ಅಗ್ಗವಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net