ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡದ ಫ್ಲಾಪ್​ ಚಿತ್ರ ಈಗ ಒಟಿಟಿಗೆ ಎಂಟ್ರಿ!

ವಿಜಯವಾಣಿ (56)
Published on

ಆಂಧ್ರಪ್ರದೇಶ: ದೊಡ್ಡ ಅಂತರದ ನಂತರ ಮೆಗಾ ಹೀರೋ ಅಲ್ಲು ಸಿರಿಶ್ ಅಭಿನಯದ ಹಾಗೂ ಸ್ಯಾನ್ ಆಂಟನ್ ನಿರ್ದೇಶನದ ಆಕ್ಷನ್-ಕಾಮಿಡಿ ಡ್ರಾಮಾ 'ಬಡ್ಡಿ' ಚಿತ್ರ ಇದೇ ಆಗಸ್ಟ್ 2ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದೇ ಆದರೂ ಸಿನಿಪ್ರೇಕ್ಷಕರನ್ನು ಮನರಂಜಿಸಲು ವಿಫಲವಾಯಿತು. ಕೇವಲ ಒಂದೆರೆಡು ವಾರದಲ್ಲೇ ಥಿಯೇಟರ್​ಗಳಿಂದ ಹೊರಬಿದ್ದ ಬಡ್ಡಿ ಚಿತ್ರವು ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಪಡೆಯಲು ಹಿಂದುಳಿಯಿತು. ಸದ್ಯ ಈ ಸಿನಿಮಾ ಈಗ ಒಟಿಟಿಗೆ ಲಗ್ಗೆಯಿಟ್ಟಿದ್ದು, ಲೈವ್​ ಸ್ಟ್ರೀಮಿಂಗ್​ಗೆ ಲಭ್ಯವಿದೆ.

ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆದ ನೆಟ್‌ಫ್ಲಿಕ್ಸ್​ನಲ್ಲಿ 'ಬಡ್ಡಿ' ರಿಲೀಸ್ ಆಗಿದ್ದು, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಇತರ ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿ ಇಂದಿನಿಂದ ಸ್ಟ್ರೀಮಿಂಗ್‌ ಆಗಲಿದೆ. ಬಾಕ್ಸ್​​ ಆಫೀಸ್​ನಲ್ಲಿ ಕಮಾಲ್ ಮಾಡದ ಅಲ್ಲು ಸಿರಿಶ್ ಚಿತ್ರ ಒಟಿಟಿಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಾಗಿದೆ.

ಚಿತ್ರದಲ್ಲಿ ಅಲ್ಲು ಸಿರಿಶ್​, ಗಾಯತ್ರಿ ಭಾರದ್ವಾಜ್ ಮತ್ತು ಪ್ರಿಶಾ ರಾಜೇಶ್ ಸಿಂಗ್, ಅಜ್ಮಲ್ ಅಮೀರ್ ಮುಂತಾದವರ ತಾರಾಗಣವಿದೆ. ಹೆಸರಾಂತ ನಿರ್ಮಾಣ ಸಂಸ್ಥೆ ಸ್ಟುಡಿಯೋ ಗ್ರೀನ್‌ ಬ್ಯಾನರ್​ನಡಿ ಚಿತ್ರ ಮೂಡಿಬಂದಿದೆ. ಚಿತ್ರಕ್ಕೆ ಹಿಪ್‌ಹಾಪ್ ತಮಿಝಾ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net