ಕಾಂಗ್ರೆಸ್​ ಬಿಜೆಪಿ ಒಟ್ಟಾಗಿದಾವೆ! ನಾವು ಮೈತ್ರಿ ಮುರೀತೀವೆ ಎಂದ ಮೈತ್ರಿ ಪಕ್ಷ

bjp
Published on

ಜೈಪುರ: ಯಾವ ಪಕ್ಷವಾದರೂ ಮೈತ್ರಿ ಮಾಡಿಕೊಳ್ಳಬಹುದು ಆದರೆ ಕಾಂಗ್ರೆಸ್​ ಬಿಜೆಪಿ ಒಟ್ಟಾಗೊ ಮಾತೇ ಇಲ್ಲ ಎನ್ನುತ್ತಾರೆ ಕೆಲವರು. ಆದರೆ ಇಲ್ಲಿ ಮಾತ್ರ ಕಾಂಗ್ರೆಸ್​, ಬಿಜೆಪಿ ಜತೆ ಸೇರಿಕೊಂಡಿದೆಯಂತೆ. ಅದಕ್ಕೆಂದೇ ಈ ಮೈತ್ರಿ ಪಕ್ಷ ಮೈತ್ರಿ ಮುರಿದುಕೊಳ್ಳುತ್ತೇವೆ ಎನ್ನುವ ಬೆದರಿಕೆಯನ್ನೂ ಹಾಕಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್​ ಬಿಜೆಪಿ ಬೆಂಬಲ ಸೂಚಿಸುತ್ತಿದೆ ಎಂದು ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ಆರೋಪಿಸಿದೆ. ಡುಂಗಾರ್​ಪುರ ಜಿಲ್ಲಾ ಪರಿಷತ್​ನಲ್ಲಿ ಬಿಟಿಪಿ 13 ಸ್ಥಾನ ಗೆದ್ದಿದೆ. 27 ಸದಸ್ಯರ ಪರಷತ್ತಿನಲ್ಲಿ ಕಾಂಗ್ರೆಸ್​ 6 ಸ್ಥಾನ ಮತ್ತು ಬಿಜೆಪಿ 8 ಸ್ಥಾನ ಗೆದ್ದಿದೆ. ಬಿಟಿಪಿಗೆ ಒಂದೇ ಒಂದು ಸ್ಥಾನದಿಂದ ಬಹುಮತ ಸೋತಿದೆ. ಈಗ ಕಾಂಗ್ರೆಸ್​ ಬಿಜೆಪಿಗೆ ಬೆಂಬಲ ನೀಡಿದೆ ಎಂದು ಬಿಟಿಪಿ ಆರೋಪಿಸಿದೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಬಿಟಿಪಿ ಸಂಸ್ಥಾಪಕ, "ಬಿಜೆಪಿ-ಕಾಂಗ್ರೆಸ್ ಒಂದಾಗಿದೆ. ಬಿಟಿಪಿ ರಾಜಸ್ಥಾನ ಸರ್ಕಾರದಿಂದ ಬೆಂಬಲವನ್ನು ಹಿಂತೆಗೆದುಕೊಳ್ಳಲಿದೆ" ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರದಲ್ಲಿ ಬಿಟಿಪಿ ಕೇವಲ ಎರಡು ಶಾಸಕರನ್ನು ಹೊಂದಿದೆ. ಈ ಪಕ್ಷ ಮೈತ್ರಿ ಮುರಿದುಕೊಂಡರೂ ಕಾಂಗ್ರೆಸ್​ನ ಆಡಳಿತದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net