More

    ಜಾನಪದ ಕಲಾವಿದರಿಗೆ ತಿಂಗಳಿಗೆ 5 ಸಾವಿರ ವಿದ್ಯಾರ್ಥಿವೇತನ ಘೋಷಣೆ

    ಲಖನೌ: ರಾಜ್ಯದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಾನಪದ ಕಲೆಗೆ ಸಂಬಂಧಿಸಿದ ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ವಿದ್ಯಾರ್ಥಿವೇತನ ನೀಡಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. 2021ರ ಜನವರಿಯಿಂದ ಜಾನಪದ ಕಲೆಯ ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ಪ್ರತಿ ತಿಂಗಳು 5,000 ರೂ ವಿದ್ಯಾರ್ಥಿವೇತನ ನೀಡುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: 8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

    ಈ ಪ್ರಸ್ತಾಪವನ್ನು ಲಲಿತ ಕಲಾ ಅಕಾಡೆಮಿ ಸರ್ಕಾರಕ್ಕೆ ಕಳುಹಿಸಿದೆ. ಸಂಶೋಧನೆ ನಡೆಸುತ್ತಿರುವ ಜಾನಪದ ಕಲಾವಿದರನ್ನು (ಗರಿಷ್ಠ 40 ವರ್ಷ ವಯಸ್ಸು) ಪ್ರೋತ್ಸಾಹಿಸಲು ಮತ್ತು ಸಹಾಯ ಮಾಡಲು ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲಾಗಿದೆ.

    ಈವರೆಗೆ, ದೃಷ್ಟಿಕಲೆಯ ವರ್ಣಚಿತ್ರಕಾರರು ಮತ್ತು ಶಿಲ್ಪಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿತ್ತು. ಈ ವಿಭಾಗದಲ್ಲಿ ಸಂಶೋಧನೆ ನಡೆಸುವ ಕಲಾವಿದರಿಗೆ ಚಿತ್ರಕಲೆ ಮತ್ತು ಶಿಲ್ಪಕಲಾ ಪ್ರದರ್ಶನಕ್ಕಾಗಿ 10,000 ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ.

    ಇದನ್ನೂ ಓದಿ: ಬಸ್ ಸಂಚಾರ ದಿಢೀರ್ ಸ್ಥಗಿತ; ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆ ಪರದಾಡಿದ ಪ್ರಯಾಣಿಕರು

    ‘ಉತ್ತರ ಪ್ರದೇಶ ಜಾನಪದ ಕಲಾವಿದರನ್ನು ಆಕರ್ಷಿಸುತ್ತದೆ. ರಾಜ್ಯ ಸರ್ಕಾರದ ನಾಯಕತ್ವದಲ್ಲಿ ಕಲಾವಿದರಿಗೆ ಸರಿಯಾದ ವೇದಿಕೆ ದೊರೆತಿರುವುದು ಮಾತ್ರವಲ್ಲದೆ, ಪ್ರೋತ್ಸಾಹವೂ ಸಿಗುತ್ತಿದೆ’ ಎಂದು ಲಲಿತ ಕಲಾ ಅಕಾಡೆಮಿಯ ಕಾರ್ಯದರ್ಶಿ ಯಶ್ವಂತ್ ಸಿಂಗ್ ರಾಥೋಡ್ ಹೇಳಿದ್ದಾರೆ. (ಏಜೆನ್ಸೀಸ್​)

    ಮಾನಸಿಕ ಅಸ್ವಸ್ಥ ಗಂಡನೆದುರೇ ನಡೆಯುತ್ತಿತ್ತು ಅತ್ತಿಗೆಯ ಅಫೇರ್​! ವಿಷಯ ಗೊತ್ತಿದ್ದ ಮೈದುನನಿಗೆ ಅತ್ತಿಗೆ ಮಾಡಿದ್ದೇನು?

    ಪ್ರಿಯತಮೆಗೆ ಗರ್ಭನಿರೋಧಕ ಮಾತ್ರೆ ಕೊಟ್ಟು ಹಸೆಮಣೆ ಏರಿದ ಭೂಪ! ಮದುವೆ ದಿನವೇ ಮಸಣ ಸೇರಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts