ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ನೇರ ನೇಮಕಾತಿ: ಬಿಎಸ್​ವೈ ಪ್ರಯತ್ನ

yeddyurappa-_EPS_1
Published on

ಬೆಂಗಳೂರು
ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪೊಲೀಸ್​, ಅರಣ್ಯ, ಆರೋಗ್ಯ ಇಲಾಖೆ ಹಾಗೂ ಸರ್ಕಾರದ ಲಾಭದಾಯಕ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ನೇರ ನೇಮಕಾತಿ ಮಾಡಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪಹೇಳಿದರು.
ಕರ್ನಾಟಕ ಒಲಂಪಿಕ್​ಸಂಸ್ಥೆ ಶನಿವಾರ ಒಲಂಪಿಕ್​ ಭವನದಲ್ಲಿ ಆಯೋಜಿಸಿದ್ದ "ಹಾಲ್​ ಆ್​ ೇಮ್​' ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪೊಲೀಸ್​ ಇಲಾಖೆಯಲ್ಲಿ ಶೇ.2 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಕ್ರೀಡಾಪಟುಗಳಿಗೆ ನೀಡಲು ಕರಡು ಪ್ರತಿ ರೂಪಿಸಲಾಗಿದೆ. ಶ್ರೀದಲ್ಲೇ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದು, ಇದೇ ರೀತಿ ಸರ್ಕಾರದ ಇತರೆ ಲಾಭದಾಯಕ ಇಲಾಖೆಗಳಿಗೂ ಇದನ್ನು ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.
ನಮ್ಮ ದೇಶದಲ್ಲಿ ಒಲಪಿಂಕ್​ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆ ಇದೆ ಎಂದ ಮಾತ್ರಕ್ಕೆ ಕ್ರೀಡಾಪಟುಗಳ ಕೊರತೆ ಇಲ್ಲ. ಆದರೆ, ಅವರಲ್ಲಿ ಆಸಕ್ತಿ, ಗುರಿ ತಲುಪಲು ಬೇಕಾದ ಛಲ ಕಡಿಮೆಯಾಗಿದೆ. ಇದರಿಂದ ನಾವು ಒಲಂಪಿಕ್ಸ್​ನಲ್ಲಿ ಹೆಚ್ಚಿನ ಪದಕ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ರಾಜ್ಯಪಾಲ ವಿ.ಆರ್​.ವಾಲಾ ಮಾತನಾಡಿ, ನಮ್ಮ ದೇಶದಲ್ಲಿ ಉತ್ತಮ ಕ್ರೀಡಾಪಟುಗಳ ಕೊರತೆ ಇಲ್ಲ. ಬದಲಾಗಿ ಅವರಿಗೆ ಅವಕಾಶಗಳ ಕೊರತೆ ಇದೆ. ಇವರಿಗೆ ಪ್ರೋತ್ಸಾಹ ನೀಡುವುದು ಅವಕಾಶಗಳನ್ನು ಕಲ್ಪಿಸಿಕೊಡುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳ ಮೇಲಿದೆ. ಕ್ರೀಡಾ ಪಟುಗಳ ತಮ್ಮ ಸ್ವಾರ್ಥಕ್ಕಾಗಿ ಆಟವಾಡುವುದಿಲ್ಲ. ಅವರು ನಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಮೊದಲೆಲ್ಲಾ ಎಲ್ಲ ಕಡೆ ಪುರುಷ ಕ್ರೀಡಾಪಟುಗಳೇ ಹೆಚ್ಚಾಗಿದ್ದರು. ಇಂದು ಕಾಲ ಬದಲಾಗಿದೆ. ಮಹಿಳಾ ಕ್ರೀಡಾಪಟುಗಳು ಕೂಡ ತಮ್ಮ ಸಾಧನೆ ತೋರುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಕ್ರೀಡೆ ಪ್ರೋತ್ಸಾಹ ನೀಡಲು ಹಣಕಾಸಿನ ಕೊರತೆ ಉಂಟಾದಲ್ಲಿ, ರಾಜ್ಯಸರ್ಕಾರ, ಉದ್ಯಮಿಗಳು, ಕೈಗಾರಿಕೋದ್ಯಮಿಗಳು ತಮ್ಮಲ್ಲಿರುವ ಹಣದಲ್ಲಿ ಶೇ.1 ಭಾಗವನ್ನು ಕ್ರೀಡೆ ಮೀಸಲಿಡಬೇಕು. ಇಲ್ಲವೆ, ಅವರಿಗೆ ಉದ್ಯೋಗವಕಾಶವನ್ನು ಕಲ್ಪಿಸಬೇಕು. ಆ ಮೂಲಕ ತ್ಯಾಗದಲ್ಲಿ ಖುಷಿ ಪಡಬೇಕೆಂದರು.
ರಾಜ್ಯ ಒಲಂಪಿಕ್​ ಸಂಸ್ಥೆ ಅಧ್ಯಕ್ಷ ಡಾ.ಕೆ.ಗೋವಿಂದರಾಜ್​, ಭಾರತೀಯ ಒಲಂಪಿಕ್​ ಸಂಸ್ಥೆ ಅಧ್ಯಕ್ಷ ಡಾ.ನರಿಂದರ್​ ಧ್ರವ ಬಾತ್ರಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್​, ರಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net