ಎಚ್​.ವಿಶ್ವನಾಥ್​ ಸಂಪುಟ ಸೇರ್ಪಡೆಗೆ ಸಿಎಂ ಪ್ರಯತ್ನ: ಸಂಪುಟ ವಿಸ್ತರಣೆ ಅಕ್ಟೋಬರ್ ಮೊದಲ ವಾರ?

H Vishwanath and CM BSY
Published on

ಬೆಂಗಳೂರು: ರಾಜಕೀಯ ಚಾವಡಿಯಲ್ಲಿ ಬಿಎಸ್​ವೈ ಸಚಿವ ಸಂಪುಟ ವಿಸ್ತರಣೆ ವಿಚಾರ ನಿತ್ಯ ಚರ್ಚೆಯ ವಿಚಾರ. ಅನೇಕ ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದು, ಯಾರಿಗೆ ಅದೃಷ್ಟ ಒಲಿಯುವುದೋ ಎಂಬ ಕಾತರದಲ್ಲಿದ್ದಾರೆ. ಇವುಗಳ ನಡುವೆ, ಆಪ್ತರನ್ನು ಸಂಪುಟಕ್ಕೆ ಸೇರಿಸಬೇಕೆಂದು ವಿಸ್ತರಣೆ ವಿಳಂಬ ಮಾಡುತ್ತಿದ್ದಾರೆ ಸಿಎಂ ಎಂಬ ಮಾತೂ ಇದೆ.

ಸರ್ಕಾರ ರಚನೆಗೆ ಕಾರಣಕರ್ತರಾದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂಬ ವಿಚಾರವೂ ಚರ್ಚೆಯಲ್ಲಿದೆ. ಈ ನಡುವೆ, ವಿಧಾನಸಭೆ ಅಧಿವೇಶನಕ್ಕೂ ಮೊದಲೇ ಸಚಿವ ಸಂಪುಟ ವಿಸ್ತರಣೆಯಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ, ಅದು ಮತ್ತೆ ಮುಂದೆ ಹೋಗಿದ್ದು, ಇದೀಗ ಮುಂದಿನ ತಿಂಗಳ ಮೊದಲ ವಾರಕ್ಕೆ ನಿಗದಿಯಾಗಿದೆ.

ಸಚಿವ ಸಂಪುಟಕ್ಕೆ ಎಚ್​.ವಿಶ್ವನಾಥ್ ಅವರನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕೆ ವಿಸ್ತರಣೆ ಮುಂದೂಡಲ್ಪಟ್ಟಿದೆ ಎಂಬ ಮಾಹಿತಿ ಇದೆ. ಸದ್ಯದ ಮಾಹಿತಿ ಪ್ರಕಾರ ಆರ್.ಶಂಕರ್, ಎಂ.ಟಿ.ಬಿ.ನಾಗರಾಜ್, ಅರವಿಂದ ಲಿಂಬಾವಳಿ, ಅಂಗಾರ, ಉಮೇಶ್ ಕತ್ತಿ ಹೆಸರು ಅಂತಿಮಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net