ಸೇವೆಯಿಂದ ನಿವೃತ್ತರಾಗಿ ತವರಿಗೆ ಆಗಮಿಸಿದ ಯೋಧರಿಗೆ ದಾವಣಗೆರೆಯಲ್ಲಿ ಹೃದಯಸ್ಪರ್ಶಿ ಸ್ವಾಗತ

bsf jan 06 2020
Published on

ದಾವಣಗೆರೆ: ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಯೋಧರಿಗೆ ನಿವೃತ್ತ ಯೋಧರ ಸಂಘ ಹಾಗೂ ಹಿಂದು ಜಾಗರಣ ವೇದಿಕೆ ಸದಸ್ಯರು ಆತ್ಮೀಯ ಸ್ವಾಗತ ಕೋರಿ ಬರ ಮಾಡಿಕೊಂಡರು.

ಸಾಸಲು ಗ್ರಾಮದ ಜಯಣ್ಣ, ಕೆಟಿಜೆ ನಗರದ ಸುಶೀಲ್ ಕುಮಾರ್ ಹಾಗೂ ತುರ್ಚುಘಟ್ಟ ಶ್ರೀನಿವಾಸ್ ಅವರನ್ನು ದಾವಣಗೆರೆ ರೈಲು ನಿಲ್ದಾಣದಲ್ಲಿ ಬರ ಮಾಡಿಕೊಂಡರು. ಯೋಧರ ಕುಟುಂಬದವರು ಆರತಿ ಮಾಡಿ ಹಣೆಗೆ ತಿಲಕವಿಟ್ಟು ಸ್ವಾಗತಿಸಿದರು.

ಯೋಧರು ಸೇನೆಯಲ್ಲಿ 20 ವರ್ಷ 6 ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net