ಬಿಎಸ್​ಇ, ನಿಫ್ಟಿ ಬೆಂಚ್​ಮಾರ್ಕ್ ಸೂಚ್ಯಂಕ ಕುಸಿತ: ಮಿಡ್​ಕ್ಯಾಪ್​, ಸ್ಮಾಲ್​ಕ್ಯಾಪ್​ ಸೂಚ್ಯಂಕ ಏರುಗತಿ

bse-1
Published on

ಮುಂಬೈ: ದುರ್ಬಲ ಜಾಗತಿಕ ಪ್ರವೃತ್ತಿಗಳ ನಡುವೆಯೇ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಟಿ ಷೇರುಗಳ ಮಾರಾಟದಿಂದಾಗಿ ಭಾರತೀಯ ಷೇರು ಮಾರುಕಟ್ಟೆಗಳ ಬೆಂಚ್​ಮಾರ್ಕ್​ ಸೂಚ್ಯಂಕಗಳು ಬುಧವಾರ ಸತತ ಎರಡನೇ ದಿನವೂ ಹಿನ್ನಡೆ ಕಂಡವು.

30 ಷೇರುಗಳ ಬಿಎಸ್‌ಇ ಸೂಚ್ಯಂಕವು 535.88 ಅಂಕ ಅಥವಾ 0.75 ಶೇಕಡಾ ಕುಸಿದು 71,356.60 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ಮಧ್ಯದಲ್ಲಿ ಇದು 588.51 ಅಂಕ ಕುಸಿದು 71,303.97 ಕ್ಕೆ ತಲುಪಿತ್ತು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್​ಎಸ್ಇ) ನಿಫ್ಟಿ ಸೂಚ್ಯಂಕವು 148.45 ಅಂಕ ಅಥವಾ ಶೇಕಡಾ 0.69 ರಷ್ಟು ಕುಸಿದು 21,517.35 ಕ್ಕೆ ತಲುಪಿತು.

ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ನೆಸ್ಲೆ, ಎಚ್‌ಸಿಎಲ್ ಟೆಕ್ನಾಲಜೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಷೇರುಗಳು ಪ್ರಮುಖವಾಗಿ ಕುಸಿತ ಕಂಡವು.

ಇಂಡಸ್‌ಇಂಡ್ ಬ್ಯಾಂಕ್, ಐಟಿಸಿ, ಭಾರ್ತಿ ಏರ್‌ಟೆಲ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಲಾಭ ಗಳಿಸಿದವು.

ಏಷ್ಯಾದ ಮಾರುಕಟ್ಟೆಗಳಲ್ಲಿ, ಸಿಯೋಲ್ ಮತ್ತು ಹಾಂಗ್ ಕಾಂಗ್ ಕುಸಿತ ಕಂಡರೆ, ಶಾಂಘೈ ಲಾಭ ದಾಖಲಿಸಿತು.

ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಮಂಗಳವಾರ ಅಮೆರಿಕದ ಮಾರುಕಟ್ಟೆಗಳು ಬಹುತೇಕವಾಗಿ ಕುಸಿತ ಕಂಡವು.

ಚೀನಾ ಮತ್ತು ಐರೋಪ್ಯ ವಲಯದ ಉತ್ಪಾದನೆಯಲ್ಲಿ ಕುಸಿತ ಸಾಧ್ಯತೆ ರೀತಿಯ ದುರ್ಬಲ ಜಾಗತಿಕ ಸೂಚಕಗಳು 2024ರಲ್ಲಿ ಜಾಗತಿಕ ಆರ್ಥಿಕ ಚೇತರಿಕೆಯ ಬಗ್ಗೆ ಆತಂಕ ಮೂಡಿಸಿದವು ಎಂದು ವಿಶ್ಲೇಷಕರು ಹೇಳಿದ್ದಾರೆ. ಕನಿಷ್ಠ ಹಣದುಬ್ಬರದ ಹೊರತಾಗಿಯೂ, ಭಾರತದ ಉತ್ಪಾದನಾ ವಲಯದ ಬೆಳವಣಿಗೆಯು ಡಿಸೆಂಬರ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಮಾಸಿಕ ಸಮೀಕ್ಷೆ ಬುಧವಾರ ತಿಳಿಸಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 1,602.16 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ವಿನಿಮಯ ಮಾಹಿತಿ ಕೇಂದ್ರ ತಿಳಿಸಿದೆ.
ಬಿಎಸ್​ಇ ಸೂಚ್ಯಂಕವು ಮಂಗಳವಾರ 379.46 ಅಂಕ ಕುಸಿದು 71,892.48 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 76.10 ಅಂಕ ಕುಸಿದು 21,665.80 ಕ್ಕೆ ತಲುಪಿತ್ತು.

ವಿವಿಧ ಸೂಚ್ಯಂಕಗಳು:

ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 37,081.58 (73.93 ಅಂಕ ಏರಿಕೆ)
ಬಿಎಸ್​ಇ ಸ್ಮಾಲ್​​ ಕ್ಯಾಪ್​ ಸೂಚ್ಯಂಕ: 43,103.61 (129.13 ಅಂಕ ಏರಿಕೆ)
ನಿಫ್ಟಿ ಮಿಡ್​ ಕ್ಯಾಪ್​ 100 ಸೂಚ್ಯಂಕ: 46,529.05 (139.40 ಅಂಕ ಏರಿಕೆ)
ನಿಫ್ಟಿ ಸ್ಮಾಲ್​ ಕ್ಯಾಪ್​ 100 ಸೂಚ್ಯಂಕ: 15188.80 (1.10 ಅಂಕ ಕುಸಿತ)
ನಿಫ್ಟಿ ಸ್ಮಾಲ್​ ಕ್ಯಾಪ್​ 250 ಸೂಚ್ಯಂಕ: 14141.00 (16.75 ಅಂಕ ಏರಿಕೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net