More

    ಜರ್ಮನ್​ ಮಹಿಳೆ ಜತೆ ಬಾಯ್​ಫ್ರೆಂಡ್​ ಸಂಬಂಧ: ಪತ್ತೇದಾರಿಕೆ ವಿವಾದದಲ್ಲಿ ಉಚ್ಚಾಟಿತ ಸಂಸದೆ ಮಹುವಾ ಮೊಯಿತ್ರಾ

    ನವದೆಹಲಿ: ಕಾಸಿಗಾಗಿ ಪ್ರಶ್ನೆ ಪ್ರಕರಣದಲ್ಲಿ ಕೆಲವು ದಿನಗಳ ಹಿಂದೆ ಲೋಕಸಭೆ ಸದಸ್ಯತ್ವದಿಂದ ಉಚ್ಚಾಟನೆಗೊಂಡಿರುವ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಅವರು ಈಗ ಮತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.

    ಪಶ್ಚಿಮ ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಗಳ ಸಹಾಯದಿಂದ ‘ತಮ್ಮ ಮಾಜಿ ಗೆಳೆಯನ ಮೇಲೆ ಅಕ್ರಮವಾಗಿ ಪತ್ತೇದಾರಿಕೆ’ಯನ್ನು ಮಹುವಾ ನಡೆಸಿದ್ದಾರೆ ಎಂದು ವಕೀಲ ಜೈ ಅನಂತ್ ದೆಹದ್ರಾಯ್​ ಆರೋಪಿಸಿದ್ದಾರೆ.

    ಸಾಮಾಜಿಕ ಮಾಧ್ಯಮ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿಯಾಗಿರುವ ಜರ್ಮನ್ ಮಹಿಳೆ ಜತೆಗೆ ತಮ್ಮ ಮಾಜಿ ಗೆಳೆಯ (ಬಾಯ್​ಫ್ರೆಂಡ್​) ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಆತನ ದೂರವಾಣಿ ಕರೆಗಳ ವಿವರಗಳನ್ನು (ಕಾಲ್​ ರೆಕಾರ್ಡ್ ಡಿಟೇಲ್ಸ್- ಸಿಡಿಆರ್) ಮಹುವಾ ಪಡೆದುಕೊಂಡಿದ್ದಾರೆ ಎಂದು ದೇಹದ್ರಾಯ್​ ಅವರು ಸಿಬಿಐ ಮತ್ತು ಗೃಹ ಸಚಿವಾಲಯಕ್ಕೆ ದೂರು ನೀಡಿದ್ದಾರೆ ಎನ್ನಲಾಗಿದೆ.

    “ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಮೊಯಿತ್ರಾ ತನ್ನ ಮಾಜಿ ಗೆಳೆಯನ ಸಂಪೂರ್ಣ ಸಿಡಿಆರ್ ಇತಿಹಾಸವನ್ನು ಪಡೆದುಕೊಂಡಿದ್ದಾಳೆ ಎಂದು ತಿಳಿದು ನನಗೆ ಆಘಾತವಾಯಿತು, ಇದರಲ್ಲಿ ತನ್ನ ಮಾಜಿ ಗೆಳೆಯನೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಬಗ್ಗೆಯೂ ನಿಖರವಾದ ಮಾಹಿತಿ ಪಡೆದಿದ್ದಾಳೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.

    ದೇಹದ್ರಾಯ್ ಅವರು ತಮ್ಮ ದೂರಿನ ಜತೆಗೆ ಕೆಲವು ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ಮತ್ತು ಸಂಬಂಧಿತ ಸಿಡಿಆರ್ ಪಟ್ಟಿಯನ್ನು ಲಗತ್ತಿಸಿದ್ದಾರೆ ಎಂದು ವರದಿ ಹೇಳಿದೆ.

    ದೇಹದ್ರಾಯ್ ಅವರು ಈ ಹಿಂದೆ ಮಹುವಾ ಮೊಯಿತ್ರಾ ಅವರ ಪಾಲುದಾರರಾಗಿದ್ದರೆಂದು ಹೇಳಲಾಗುತ್ತದೆ. ಸಾಕು ನಾಯಿಯನ್ನು ಪಾಲನೆ ಕುರಿತು ಮೊಯಿತ್ರ ಹಾಗೂ ದೇಹದ್ರಾಯ್​ ನಡುವೆ ದ್ವೇಷ ತಲೆದೋರಿತ್ತು ಎಂದು ವರದಿಯಾಗಿದೆ. ಮೊಯಿತ್ರಾ ಕಳೆದ ವರ್ಷ ಅತಿಕ್ರಮಣ, ಕಳ್ಳತನ, ಅಸಭ್ಯ ಸಂದೇಶ ಮತ್ತು ನಿಂದನೆಗಾಗಿ ದೇಹದ್ರಾಯ್​ ವಿರುದ್ಧ ಅನೇಕ ಪೊಲೀಸ್ ದೂರುಗಳನ್ನು ದಾಖಲಿಸಿದ್ದರು.

    ಲೋಕಸಭೆ ಚುನಾವಣೆಗಾಗಿ ದಕ್ಷಿಣ ರಾಜ್ಯಗಳತ್ತ ಪ್ರಧಾನಿ ಮೋದಿ ಚಿತ್ತ: ‘ಮಿಷನ್ ಸೌತ್’ ಗುರಿ ಏನು?

    ಮುಂಬೈ ಮಹಿಳೆಗೆ 19 ವರ್ಷಗಳ ನಂತರ ಮಹಾರಾಷ್ಟ್ರ ಸಚಿವರ ಸಂಬಂಧಿ ರೂ 8.41 ಕೋಟಿ ಪಾವತಿ ಮಾಡಿದ್ದೇಕೆ?

    “ಸತ್ಯ ಮೇಲುಗೈ ಸಾಧಿಸಿದೆ”: ಹಿಂಡನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಿಸಿದ ಗೌತಮ್ ಅದಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts