More

    ಮುಂಬೈ ಮಹಿಳೆಗೆ 19 ವರ್ಷಗಳ ನಂತರ ಮಹಾರಾಷ್ಟ್ರ ಸಚಿವರ ಸಂಬಂಧಿ ರೂ 8.41 ಕೋಟಿ ಪಾವತಿ ಮಾಡಿದ್ದೇಕೆ?

    ಮುಂಬೈ: ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಮತ್ತು ಅವರ ಕುಟುಂಬದೊಂದಿಗೆ ಅಂದಾಜು 19 ವರ್ಷಗಳ ಕಾನೂನು ಹೋರಾಟದ ನಂತರ, 78 ವರ್ಷದ ಡೋರೀನ್ ಫರ್ನಾಂಡಿಸ್ ಅವರು ತಮ್ಮ ಪೂರ್ವಜರ ಬಂಗಲೆಯ ಮಾರಾಟದಿಂದ ತಮಗೆ ಬರಬೇಕಾದ ಹಣವನ್ನು ಕೊನೆಗೂ ಪಡೆದುಕೊಂಡಿದ್ದಾರೆ.

    ಭುಜಬಲ್ ಅವರ ಸೋದರಳಿಯ ಸಮೀರ್ ಭುಜಬಲ್ ಅವರಿಗೆ ಸೇರಿದ ಪರ್ವೇಶ್ ಕನ್​ಸ್ಟ್ರಕ್ಷನ್‌ನಿಂದ ಫರ್ನಾಂಡಿಸ್ ಅವರು 8.41 ಕೋಟಿ ರೂ. ಪಡೆದುಕೊಂಡಿದ್ದಾರೆ.

    ಕಳೆದ ಎರಡು ದಶಕಗಳಲ್ಲಿ ಡೋರಿನ್ ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ. 2021 ರಲ್ಲಿ ತಮ್ಮ ಪತಿ ಕ್ಲೌಡ್ ಫರ್ನಾಂಡಿಸ್ ಅವರನ್ನು ಕಳೆದುಕೊಂಡಿದ್ದಾರೆ. ಸ್ವಲೀನತೆಯ (ಆಟಿಸಂ) ಬಾಧಿಸುವ ಮೂವರು ಪುತ್ರರಿಗೆ ಏಕೈಕ ಆರೈಕೆದಾರರಾಗಿದ್ದಾರೆ.

    ಸಾಮಾಜಿಕ ಕಾರ್ಯಕರ್ತೆ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ನಾಯಕಿ ಅಂಜಲಿ ದಮಾನಿಯಾ ಅವರು ಫರ್ನಾಂಡಿಸ್ ಕುಟುಂಬದ ದುರವಸ್ಥೆಯನ್ನು ಸಾರ್ವಜನಿಕ ಗಮನಕ್ಕೆ ತಂದರು. 2014-15ರಲ್ಲಿ ಭುಜಬಲ್ ಮತ್ತು ಸೋದರಳಿಯ ಸಮೀರ್ (ಮಾಜಿ ಸಂಸದ) ಬಂಧನಕ್ಕೆ ಒಳಗಾದರು.

    “ನಾವು ಎಲ್ಲಾ ಪೇಪರ್‌ಗಳನ್ನು ಪರಿಶೀಲಿಸಿದ್ದೇವೆ; ಅವರು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದಾರೆ. ಪಾವತಿ ಮಾಡಲಾಗಿದೆ” ಎಂದು ಫರ್ನಾಂಡಿಸ್ ಕುಟುಂಬಕ್ಕೆ ಹಣ ಪಾವತಿಸಿದ ನಂತರ ಭುಜಬಲ್‌ ಕುಟುಂಬದವರು ಹೇಳಿದ್ದಾರೆ.

    ಡೋರಿನ್‌ ಅವರ ಪಾಸ್‌ಬುಕ್‌ನ ಚಿತ್ರಗಳನ್ನು ದಮಾನಿಯಾ ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ, ಇದು ಡೋರಿನ್​ ಅವರ ಬ್ಯಾಂಕ್ ಖಾತೆಗೆ ಜಮೆಯಾದ ಮೊತ್ತವನ್ನು ಪ್ರದರ್ಶಿಸುತ್ತದೆ.

    “ಸುಮಾರು 20 ವರ್ಷಗಳ ನಂತರ ಭುಜಬಲ್ ಕುಟುಂಬವು ಅಂತಿಮವಾಗಿ ಡೋರಿನ್ ಫೆರ್ನಾಂಡಿಸ್ ಅವರ ಬಾಕಿಯನ್ನು ಪಾವತಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಡೋರೀನ್ ಈಗ ಪಾವತಿಯ ಸಂಪೂರ್ಣ ಪಾಲನ್ನು ಪಡೆದಿದ್ದಾರೆ. 78 ವರ್ಷದ ತಾಯಿ ಇನ್ನು ಮುಂದೆ ತಮ್ಮ 3 ಸ್ವಲೀನತೆಯ ಮಕ್ಕಳ ಭವಿಷ್ಯದ ಬಗ್ಗೆಚಿಂತಿಸಬೇಕಾಗಿಲ್ಲ” ಎಂದು ದಮಾನಿಯಾ ಪೋಸ್ಟ್​ನಲ್ಲಿ ಹೇಳಿದ್ದಾರೆ.

    ಭುಜಬಲ ಅವರು ತಮ್ಮ ಬಾಕಿಯನ್ನು ಪಾವತಿಸುವಂತೆ ಮಾಡಿದ್ದಕ್ಕಾಗಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

    “ನಾನು ಯಾವಾಗಲೂ ಪವಾರ್ ಕುಟುಂಬದೊಂದಿಗೆ ಬಲ ಪ್ರದರ್ಶಿಸಿದ್ದೇನೆ, ಅದರ ಹೊರತಾಗಿಯೂ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಸುಪ್ರಿಯಾ ಸುಳೆ ಈ ವಿಷಯದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಗೌರವಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತೇನೆ” ಎಂದೂ ಎಎಪಿ ನಾಯಕಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

    ಕಳೆದ ತಿಂಗಳು, ಡೋರೀನ್ ಮತ್ತು ಅವಳ ಮೂವರು ಸ್ವಲೀನತೆಯ ಪುತ್ರರೊಂದಿಗೆ ಧರ್ಮ (ಪ್ರತಿಭಟನೆ) ದಲ್ಲಿ ಕುಳಿತುಕೊಳ್ಳುವುದಾಗಿ ದಮಾನಿಯಾ ಬೆದರಿಕೆ ಹಾಕಿದ್ದರು, ಆದರೆ, ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಈ ಮಧ್ಯಪ್ರವೇಶಿಸಿರಬಹುದಾಗಿದೆ.

    ಡೋರಿನ್ ಅವರೂ ಹಣ ಪಾವತಿಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದು, ತಮ್ಮ ಮೂವರು ಪುತ್ರರ ಭವಿಷ್ಯವು ಈಗ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. “ಇದಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆ. ನಾನು ಅನೇಕ ಸಭೆಗಳಿಗೆ ಹಾಜರಾಗಬೇಕಾಗಿತ್ತು. ಅಂಜಲಿ ದಮಾನಿಯಾ ಅವರ ಮಧ್ಯಸ್ಥಿಕೆಗೆ ನಾನು ಕೃತಜ್ಞನಾಗಿದ್ದೇನೆ. ನನ್ನ ಪುತ್ರರು ಆರಾಮದಾಯಕ ಜೀವನವನ್ನು ಹೊಂದಲು ನಾನು ಈ ಹಣವನ್ನು ಉಳಿಸಬೇಕಾಗಿದೆ. ಅವರು ವಿಶೇಷ ಅಗತ್ಯಗಳನ್ನು ಹೊಂದಿದ್ದಾರೆ. ಕಾಳಜಿ ವಹಿಸಬೇಕು. ಪಾವತಿಸಿರುವ ಮೊತ್ತವು ಮೂರು ಫ್ಲಾಟ್‌ಗಳದ್ದಾಗಿದೆ. ನಮಗೆ ಐದು ಫ್ಲಾಟ್‌ಗಳ ಭರವಸೆ ನೀಡಲಾಗಿತ್ತು, ಆದರೆ, ನಾವು ಪಡೆದದ್ದರಲ್ಲಿ ನನಗೆ ತೃಪ್ತಿ ಇದೆ” ಎಂದಿದ್ದಾರೆ.

    ಏನಿದು ಪ್ರಕರಣ?:
    ಡೋರೀನ್ ಫರ್ನಾಂಡಿಸ್ ಅವರ ಕುಟುಂಬವು 1994 ರಲ್ಲಿ ಪುನರಾಭಿವೃದ್ಧಿಗಾಗಿ ರಹೇಜಾಸ್‌ ಸಂಸ್ಥೆಗೆ ತಮ್ಮ ಬಂಗಲೆಗಳನ್ನು ನೀಡಿದ್ದು, ಇದರ ಬದಲಾಗಿ ಐದು ಫ್ಲಾಟ್‌ಗಳಿಗೆ ವಿನಿಮಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಡೆವಲಪರ್‌ಗಳು ಇದನ್ನು ಸಮೀರ್ ಭುಜಬಲ್ ಅವರ ಪರ್ವೇಶ್ ಕನ್‌ಸ್ಟ್ರಕ್ಷನ್‌ಗೆ ಮಾರಾಟ ಮಾಡಿದರು, ಈ ಸಂಸ್ಥೆಯು ಅಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಿತು. ಆದರೆ, ಫರ್ನಾಂಡಿಸ್ ಕುಟುಂಬಕ್ಕೆ ಏನೂ ಸಿಕ್ಕಿರಲಿಲ್ಲ.

    ಈ ಕುರಿತ ಆರೋಪವನ್ನು ಸಮೀರ್ ಭುಜಬಲ್ ನಿರಾಕರಿಸಿದ್ದರು. ಅಲ್ಲದೆ, ರಹೇಜಾ ಕಂಪನಿಯಿಂದ ಆಸ್ತಿಯನ್ನು ಖರೀದಿಸಿರುವುದಾಗಿ ಹೇಳಿದ್ದರು. ಅವರು ಮಾನವೀಯ ಆಧಾರದ ಮೇಲೆ ಅವರಿಗೆ 50 ಲಕ್ಷ ರೂ.ಗಳನ್ನು ನೀಡಲು ಮುಂದಾಗಿದ್ದರು, ಆದರೆ ಡೋರಿನ್ ಇದನ್ನು ನಿರಾಕರಿಸಿದ್ದರು.

    “ಸತ್ಯ ಮೇಲುಗೈ ಸಾಧಿಸಿದೆ”: ಹಿಂಡನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಿಸಿದ ಗೌತಮ್ ಅದಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts