VIDEO| ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

Kill
Published on

ಚೆನ್ನೈ: ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈ ಪುಲಿಯಂಥೋಪ್​ನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇ ರಮೇಶ್​ ಬಾಬು (34) ಕೊಲೆಯಾದವ. ಈತ ಹಳೆಯ ರೌಡಿ ಶೀಟರ್​. ಕೊಲೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಹೇಳಲಾಗಿದೆ. ಕೊಲೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಇಕ್ಕಾಟದ ರಸ್ತೆಯಲ್ಲಿ ಮಕ್ಕಳು ಅವರ ಮನೆಯ ಬಳಿ ಆಟವಾಡುತ್ತಾ ನಿಂತಿದ್ದಾಗ ರಮೇಶ್​ ಬಾಬುವನ್ನು ಅಟ್ಟಾಡಿಸಿಕೊಂಡು ಬರುವ ದುಷ್ಕರ್ಮಿಗಳು ರಮೇಶ್​ನನ್ನು ಕೆಡವಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗುತ್ತಾರೆ. ಈ ದೃಶ್ಯವನ್ನು ನೋಡಿದ ಸ್ಥಳೀಯ ಮಹಿಳೆಯರು ಸಹ ಬೆಚ್ಚಿಬಿದ್ದಾರೆ.

ಮೂಲಗಳ ಪ್ರಕಾರ ರಮೇಶ್​ ಬಾಬು ಮಂಗಳವಾರ ರಾತ್ರಿ ಮನೆಗೆ ಮರಳುತ್ತಿದ್ದ. ಅಂದು ರಾತ್ರಿ 9.30ರ ಸುಮಾರಿಗೆ ಗುರುಸ್ವಾಮಿ ನಗರವನ್ನು ದಾಟುವಾಗ ದುಷ್ಕರ್ಮಿಗಳ ಗುಂಪು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದೆ. ಈ ವೇಳೆ ರಮೇಶ್​ ಓಡಿ ಹೋಗಲು ಯತ್ನಿಸಿದಾದರೂ ಅದು ಸಾಧ್ಯವಾಗದೇ ಗಂಭೀರ ಗಾಯಗಳಿಂದ ನರಳಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ 8 ಆರೋಪಿಗಳನ್ನು ವಿಜಯ್​ಕುಮಾರ್​​ (31), ವಿಘ್ನೇಶ್​ ಕುಮಾರ್​ (26), ಶಂಕರ್​ (40), ಅಭಿನೇಶ್​ (24), ಸೂರ್ಯ (26), ರಾಕೇಶ್​ ಕುಮಾರ್​ (25), ಸತ್ಯ (24) ಮತ್ತು ಶರತ್​ ಕುಮಾರ್​ (30) ಎಂದು ಗುರುತಿಸಲಾಗಿದ್ದು, ಪರಾರಿಯಾಗಿದ್ದವರಲ್ಲಿ ಕೆಲವರನ್ನು ಚೆನ್ನೈನ ರೆಡ್​ ಹಿಲ್ಸ್​ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net