

ಬೆಂಗಳೂರು:
ಭ್ರೂಣ ಹತ್ಯೆ ಪ್ರಕರಣದಲ್ಲಿ 23 ಆಸ್ಪತ್ರೆಯ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಒಂದು ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿಯ ಸಿ ಟಿ ರವಿ ಪ್ರಶ್ನೆಗೆ ಉತ್ತರಿಸಿ, ಮೊದಲು ನಾವು ಕಾನೂನಾತ್ಮಕವಾಗಿ ಮಾಡ್ತಿರಲಿಲ್ಲ. ಈಗ ಪೋಲಿಸ್ ಇಲಾಖೆಯ ಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಪ್ರಕರಣದಲ್ಲಿ ಒಳಗಿನವರು ಇರ್ತಾರೆ, ಹೊರಗಿನವರು ಇರ್ತಾರೆ. ನಮ್ಮ ಡಿಎಚ್‌ಓ ಗಳು ಈ ಬಗ್ಗೆ ಕ್ರಮ ಕೈಗೊಂಡು ಎ್ಐಆರ್ ಮಾಡಿದ್ದಾರೆ ಎಂದರು.
ನಕಲಿ ವೈದ್ಯರ ಬಗ್ಗೆ ಈಗ ಮಾಹಿತಿ ಇಲ್ಲ, ಸ್ಪಷ್ಟ ಮಾಹಿತಿ ಕೊಡ್ತೇವೆ. ಮೈಸೂರಿನ ಮಾತಾ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಿದ್ದೇವೆ. ಇರುವ ಕಾನೂನೇ ಬಲವಾಗಿದೆ, ಅದನ್ನ ಸಮರ್ಪಕವಾಗಿ ಜಾರಿಗೊಳಿಸಬೇಕಿದೆ ಎಂದರು.
ಚರ್ಚೆಯಲ್ಲಿ ಯು ಬಿ ವೆಂಕಟೇಶ್, ಉಮಾಶ್ರೀ ಭಾಗವಹಿಸಿದ್ದರು.