

ಸೈಬೀರಿಯಾ: ಅಮೆರಿಕದ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಚುನಾವಣೆ ನಿನ್ನೆ ಮುಕ್ತಾಯವಾಗಿದೆ. ಹಂತಹಂತವಾಗಿ ಮತ ಎಣಿಕೆ ಕಾರ್ಯವೂ ನಡೆಯುತ್ತಿದೆ.
ಅನೇಕ ರಾಜಕೀಯ ವಿಶ್ಲೇಷಣೆಗಳು ಅಮೆರಿಕದಲ್ಲಿ ಯಾರು ಗೆಲುವು ಸಾಧಿಸಬಹುದು ಎಂಬುದನ್ನು ಊಹಿಸಿವೆ. ಆದರೆ ರಷ್ಯಾದ ಕ್ರಾಸ್ನೊಯಾರ್ಸ್ಕ್ ದ ಪ್ರಾಣಿ ಸಂಗ್ರಹಾಲಯದ ತಜ್ಞರು ಅಮೆರಿಕ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಭವಿಷ್ಯ ಹೊರಬಿದಿದ್ದಿದೆ.
ತಜ್ಞರು ಎಂದರೆ ಮನುಷ್ಯರು ಎಂದುಕೊಳ್ಳಬೇಡಿ. ಭವಿಷ್ಯ ಹೇಳಿರುವವರು ಕರಡಿ ಮತ್ತು ಹುಲಿಗಳು. ಈ ಪ್ರಾಣಿಗಲು ಕಲ್ಲಂಗಡಿಹಣ್ಣಿನ ಮೂಲಕ ಅಮೆರಿಕ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ತಿಳಿಸಿವೆ. ಕ್ರಾಸ್ನೊಯಾರ್ಸ್ಕ್ದ ರೊಯೆವ್ ರೋಚೆ ಮೃಗಾಲಯದಲ್ಲಿರುವ ಖಾನ್ ಎಂಬ ಹುಲಿ ಮತ್ತು ಬುಯಾನ್ ಹೆಸರಿನ ಕಂದು ಬಣ್ಣದ ಕರಡಿ ಹೇಳಿರುವ ಭವಿಷ್ಯದ ಪ್ರಕಾರ ಅಮೆರಿಕದಲ್ಲಿ ಜೋ ಬಿಡೆನ್ ಅವರೇ ಮುಂದಿನ ಅಧ್ಯಕ್ಷರು. ಇದನ್ನೂ ಓದಿ: ತುರ್ತುಪರಿಸ್ಥಿತಿಯನ್ನು ನೆನಪಿಸುವಂತಿದೆ ಗೋಸ್ವಾಮಿ ಬಂಧನ: ಕೇಂದ್ರ ಸಚಿವ ಜಾವಡೇಕರ್
ಎರಡು ಕಲ್ಲಂಗಡಿ ಹಣ್ಣುಗಳನ್ನು ಕಟ್ ಮಾಡಿ, ಒಂದರ ಮೇಲೆ ಟ್ರಂಪ್ ಚಿತ್ರ ಹಾಗೂ ಮತ್ತೊಂದರ ಮೇಲೆ ಜೋ ಬಿಡೆನ್ ಚಿತ್ರವನ್ನು ಕೆತ್ತಲಾಗಿತ್ತು. ಎರಡೂ ಹಣ್ಣುಗಳನ್ನು ಅಕ್ಕಪಕ್ಕ ಇಡಲಾಗಿತ್ತು. ಬುಯಾನ್ ಕರಡಿಯೆದುರು ಇದ್ದ ಹಣ್ಣುಗಳಲ್ಲಿ ಜೋ ಬಿಡೆನ್ ಅವರ ಚಿತ್ರ ಇರುವ ಹಣ್ಣನ್ನು ಅದು ತಿಂದಿದೆ. ಹಾಗೇ, ಖಾನ್ ಎದುರು ಇಡಲಾಗಿದ್ದ ಎರಡೂ ಹಣ್ಣುಗಳಲ್ಲಿ ಕೂಡ ಬಿಡೆನ್ ಚಿತ್ರ ಇರುವ ಹಣ್ಣನ್ನೇ ಅದು ತನ್ನ ಕಾಲುಗಳಿಂದ ಉರುಳಿಸಿದೆ. ಈ ವಿಡಿಯೋ ಕೂಡ ಎಲ್ಲ ಕಡೆ ವೈರಲ್ ಆಗಿದೆ. ಹಾಗೇ ಬಾರ್ಕನ್ ಎಂಬ ಇನ್ನೊಂದು ಹುಲಿಯೂ ಬಿಡೆನ್ ಅವರೇ ಗೆಲ್ಲುತ್ತಾರೆ ಎಂಬುದನ್ನು ತೋರಿಸಿದೆ.
2016ರಲ್ಲಿ ಇದೇ ಮೃಗಾಲಯದ ಫೆಲಿಕ್ಸ್ ಎಂಬ ಕರಡಿ, ಟ್ರಂಪ್ ಹೆಸರು ಇರುವ ಕುಂಬಳಕಾಯಿಯನ್ನು ಎತ್ತಿಕೊಳ್ಳುವ ಮೂಲಕ ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕ ಅಧ್ಯಕ್ಷರಾಗುತ್ತಾರೆ ಎಂದು ಸರಿಯಾಗಿ ಭವಿಷ್ಯ ನುಡಿದಿತ್ತು. ಇದೀಗ ಈ ಮೂರು ಪ್ರಾಣಿಗಳ ಭವಿಷ್ಯ ಕುತೂಹಲ ಕೆರಳಿಸಿದೆ. (ಏಜೆನ್ಸೀಸ್)