

ವಿಲ್ ಮಾಡಿದವರು, ಬದುಕಿರುವಾಗಲೇ, ವಿಲ್ ಯಾರಿಗೆ ಮಾಡಿರುತ್ತಾರೋ ಅವರು ತೀರಿಕೊಂಡರೆ , ವಿಲ್ /ಮರಣಶಾಸನದಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ನಿಮ್ಮ ಪತಿ ತೀರಿಕೊಂಡ ನಂತರ ನಿಮ್ಮ ಪತಿಯ ಸೋದರತ್ತೆಯ ಕಡೆಯಿಂದ ನಿಮಗಾಗಲೀ ನಿಮ್ಮ ಮಕ್ಕಳಿಗಾಗಲೀ ಮತ್ತೊಂದು ವಿಲ್ ಆಗಿದ್ದರೆ ಅಥವಾ ನೋಂದಾಯಿತ ದಾನ ಪತ್ರ ಆಗಿದ್ದರೆ , ಆಗ ಆಸ್ತಿಯಲ್ಲಿ ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಹಕ್ಕು ಇರುತ್ತಿತ್ತು. ಮಕ್ಕಳಿಲ್ಲದ ಹಿಂದೂ ವಿಧವೆಗೆ, ಆಕೆಯ ಗಂಡನ ಕಡೆಯಿಂದ ಬಂದ ಆಸ್ತಿ, ಆಕೆಯ ಮರಣಾ ನಂತರ ಆಕೆಯ ಗಂಡನ ಕಡೆಯ ವಾರಸುದಾರರಿಗೇ ಹೋಗುತ್ತದೆ.
ನೀವು ಹಿರಿಯರನ್ನು ಕೂರಿಸಿ, ನಿಮ್ಮ ಪತಿಯ ಸೋದರತ್ತೆಯ ಗಂಡನ ಕಡೆಯವರನ್ನು ಕರೆಯಿಸಿ ರಾಜಿ ಮಾತಾಡಿ ಅನುಕಂಪದಿಂದ ಧರ್ಮ ಕರ್ಮದ ದೃಷ್ಟಿಯಿಂದ ಏನಾದರೂ ಪಡೆಯಲು ಸಾಧ್ಯವೇ ಎಂದು ನೋಡುವುದು ಒಳ್ಳೆಯದು.