

First Night | ನೂರಾರು ಕನಸುಗಳನ್ನು ಹೊತ್ತು ಒಟ್ಟಾಗಿ ಜೀವನದಲ್ಲಿ ಸಂತೋಷವಾಗಿರಲು ಇಡುವ ಮೊದಲ ಹೆಜ್ಜೆ ಮದುವೆ. ದಾಂಪತ್ಯವು ನವಜೋಡಿಗಳಿಗೆ ಹೊಸ ಉಲ್ಲಾಸ ಹಾಗೂ ಸಂತಸವನ್ನು ತಂದುಕೊಡುತ್ತದೆ. ಸಾಮಾನ್ಯವಾಗಿ ಮದುವೆಯ ದಿನ ಸಂಬಂಧಿಕರು, ಸಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು ನವ ದಂಪತಿಯನ್ನು ಕೋಣೆಗೆ ಕಳುಹಿಸುವಾಗ ತಮಾಷೆ ಮಾಡುವುದು, ಹಣ ಕೇಳುವುದು ಸಾಮಾನ್ಯ. ಇನ್ನೂ ಕೆಲವರು ರೂಮಿನಲ್ಲಿ ಅವರಿಗೆ ತೊಂದರೆಯಾಗುವಂತೆ ಅಲಾರಂ ಇಡುವುದು, ಆಟವಾಡುತ್ತ ಕುಳ್ಳುವುದು, ಮಂಚ ಮುರಿಯುವಂತೆ ಮಾಡುವುದು ಹೀಗೆ ನಾನಾ ಬಗೆಯ ತೊಂದರೆಗಳನ್ನು ಕೊಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅಣ್ಣನ ಫಸ್ಟ್ ನೈಟ್ ನೋಡಲು ರೂಮಿನಲ್ಲಿ ಕ್ಯಾಮರಾ ಹಿಡಿದು ಕುಳಿತಂತಹ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಅಣ್ಣನ ಫಸ್ಟ್ ನೈಟ್ ರೂಮಿನಲ್ಲೇ ಕ್ಯಾಮರಾ ಇಟ್ಟು ಅಟ್ಟದಲ್ಲಿ ಅಡಗಿ ಕುಳಿತು ಎಲ್ಲವನ್ನೂ ರೆಕಾರ್ಡ್ ಮಾಡಿಕೊಳ್ಳಲು ತಮ್ಮ ಬಯಸಿದ್ದ. ಆದರೆ ಅಷ್ಟರಲ್ಲೇ ದಂಪತಿಳು ರೂಮಿಗೆ ಬಂದಾಗ ಯಾರೋ ತಮ್ಮನ್ನು ಗಮನಿಸುತ್ತಿದ್ದಾರೆ ಎಂದು ಇಬ್ಬರೂ ಭಾವಿಸಿದ್ದರು. ಅಲ್ಲೇ ಅಟ್ಟದಲ್ಲಿ ತಮ್ಮನನ್ನು ನೋಡಿದ ತಕ್ಷಣ ಕೆಳಗಿಳಿದು ಹೊರಗೆ ಬರುವಂತೆ ಎಚ್ಚರಿಸಿ ರೆಕಾರ್ಡ್ ಮಾಡುವ ಮೊದಲೇ ಪತ್ತೆ ನಿಲ್ಲಿಸಿದ್ದಾರೆ. ಹೀಗಾಗಿ ಇಬ್ಬರ ಇಬ್ಬರ ಮಾನವೂ ಉಳಿಯಿತು. ವರನ ತಮ್ಮ ಕ್ಯಾಮರಾ ಹಿಡಿದು ಅಟ್ಟದ ಮೇಲೆ ಕುಳಿತಿರುವುದನ್ನು ಕಂಡು ಸಂಬಂಧಿಕರೆಲ್ಲರೂ ಕೋಪಗೊಂಡರು. ಆತನನ್ನು ತೀವ್ರವಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಲಾಯಿತು.
ಮಹಿಳೆಯ ಚಿತ್ರಗಳನ್ನು ಒಪ್ಪಿಗೆಯಿಲ್ಲದೆ ಸೆರೆಹಿಡಿಯುವುದು ಅಥವಾ ವೀಕ್ಷಿಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354C ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಮೊದಲ ಬಾರಿಗೆ ಅಪರಾಧಿಗಳಿಗೆ 1 ರಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಡಿಜಿಟಲ್ ವಿಧಾನಗಳ ಮೂಲಕ ಗೌಪ್ಯತೆಯ ಉಲ್ಲಂಘನೆಯ ಪ್ರಕರಣವನ್ನು ಸಹ ದಾಖಲಿಸಬಹುದು. ಒಪ್ಪಿಗೆಯಿಲ್ಲದೆ ವ್ಯಕ್ತಿಯ ಖಾಸಗಿ ಚಿತ್ರಗಳನ್ನು ತೆಗೆದುಕೊಂಡು ವಿತರಿಸುವುದು ಅಪರಾಧ.
ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಎಲ್ಲರಲ್ಲಿಯೂ ಮಿತಿ ಮೀರುತ್ತಿದೆ. ಕೆಲವರು ಮೊದಲ ರಾತ್ರಿಯ ಕೋಣೆ, ಬೆಡ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ರೀತಿಯ ಹುಚ್ಚುತನವು ಈಗ ಕೆಲವು ಕುಟುಂಬ ಸದಸ್ಯರ ವೀಡಿಯೊಗಳನ್ನು ವೈರಲ್ ಮಾಡುವ ಮಟ್ಟಕ್ಕೂ ಹೋಗುವಂತೆ ಮಾಡುತ್ತಿದೆ. ತಮಗಷ್ಟೆ ಅಲ್ಲದೆ ತಮ್ಮ ಕುಟುಂಬದ ಮರ್ಯಾದೆಯನ್ನೂ ತೆಗೆಯುವ ಮಟ್ಟಕ್ಕೆ ಇಳಿದಿದ್ದಾರೆ. ಈ ರೀಲ್ಸ್ ಹುಚ್ಚು ಯುವಜನತೆಯನ್ನು ದಾರಿತಪ್ಪಿಸುವ ಮಟ್ಟಕ್ಕೆ ಇಳಿದಿದೆ.