

ಬೈಲಕುಪ್ಪೆ: ನ್ಯಾಷನಲ್ 5ನೇ ಸೌತ್ ಇಂಡಿಯಾ ಕರಾಟೆ ಸ್ಪಧೆರ್ಯಲ್ಲಿ ಬೆಣಗಾಲು ಗ್ರಾಮದ .ಎನ್.ಅಬ್ದುಲ್ ಕಂಚಿನ ಶೀಲ್ಡ್ ಗಳಿಸಿದ್ದಾರೆ ಎಂದು ಕರಾಟೆ ಶಿಕ್ಷಕ ಎ.ಎಂ.ಮಹಮದ್ ಇಕ್ಬಾಲ್ ತಿಳಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಸಮೀಪದ ಕುಶಾಲನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಕರಾಟೆ ಪಟುವಾದ ಎನ್.ಅಬ್ದುಲ್ ತಮಿಳುನಾಡಿನ ಮದುರೈ ಫಾತಿಮಾ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕಥಾ ವಿಭಾಗದ ಕಂಚಿನ ಶೀಲ್ಡ್ ಪಡೆೆದಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯಾಸಂಸ್ಥೆ ಮುಖ್ಯಸ್ಥರಾದ ರಾಮಮೂರ್ತಿ, ನಾರಾಯಣ, ಸುರೇಶ್‌ಕುಮರ್ ಮತ್ತಿತರರು ಹಾಜರಿದ್ದರು.