

ಪಣಜಿ: ಗೋವಾದ ಬೆನೌಲಿಮ್ ಬೀಚ್‌ನಲ್ಲಿ ಗೂಳಿಯೊಂದು ಕೊಂಬಿನಿಂದ ತಿವಿದ ಪರಿಣಾಮ 79 ವರ್ಷದ ಬ್ರಿಟನ್ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ದಕ್ಷಿಣ ಗೋವಾ ಜಿಲ್ಲಾ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಬ್ರಿಟನ್ ಮೂಲದ ಮೋರಿಸ್ ತನ್ನ ಸ್ನೇಹಿತರೊಂದಿಗೆ ಬೆನೌಲಿಮ್ ಬೀಚ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಬ್ರಿಟನ್ ಮಹಿಳೆ ಕಡಲ ತೀರದ ದಡದಲ್ಲಿ ವಿಹಾರ ಮಾಡುವ ವೇಳೆ ನಾಯಿ ಗೂಳಿಯನ್ನು ಅಟ್ಟಿಸಿಕೊಂಡು ಬಂದಿದ್ದರಿಂದ ಎತ್ತು ಓಡುವ ಭರದಲ್ಲಿ ಅದರ ಕೊಂಬುಗಳು ಮಹಿಳೆ ಕಾಲಿಗೆ ತಾಗಿ ಇರಿತವಾಗಿದೆ ಈ ವೇಳೆ ಹೆಚ್ಚು ರಕ್ತಸ್ರಾವವಾಗಿದೆ ಎಂದು ಹೇಳಿದ್ದಾರೆ.
ಗಾಯಗೊಂಡ ಮಹಿಳೆಯನ್ನು ದಕ್ಷಿಣ ಗೋವಾದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಕಾಲಿಗೆ ಐದು ಹೊಲಿಗೆ ಹಾಕಲಾಗಿದೆ. ಮಹಿಳೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವೈದ್ಯರು ಹೇಳಿದ್ದಾರೆ.