

ಲಂಡನ್: "ಇಲ್ಲಿನ ದಾದಿ ಶಿಶುಗಳನ್ನು ಕೊಂದಾಗ ಆಸ್ಪತ್ರೆಯು ಸ್ವಲ್ಪ ಸಂವೇದನಾಶೀಲವಾಗಿ ಕಾರ್ಯನಿರ್ವಹಿಸಿದ್ದರೆ, ಯಾವುದೇ ಮಗು ಸಾಯುತ್ತಿರಲಿಲ್ಲ''. ಇದು ಏಳು ಮಕ್ಕಳನ್ನು ಕೊಂದ ದಾದಿ ಲೂಸಿ ಲೆಟ್ಬಿ ಎಂಬಾಕೆಯನ್ನು ನ್ಯಾಯಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ, ಯುಕೆಯಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಮಕ್ಕಳ ವೈದ್ಯರು ಹೇಳಿದ್ದು... ಯುಕೆಯ ಚೆಸ್ಟರ್‌ನಲ್ಲಿ ದಾದಿಯೊಬ್ಬಳು ಅನೇಕ ಮಕ್ಕಳನ್ನು ಕೊಂದಿದ್ದು, ಈಗ ಆಕೆ ಶಿಕ್ಷೆಗೊಳಗಾಗಿದ್ದಾಳೆ.
ಹಲವಾರು ರೀತಿಯಲ್ಲಿ ಮಕ್ಕಳನ್ನು ಕೊಂದ ನರ್ಸ್
ನರ್ಸ್ ಲೂಸಿ ಲೆಟ್ಬಿ ಮಕ್ಕಳನ್ನು ವಿವಿಧ ರೀತಿಯಲ್ಲಿ ಕೊಂದರು. ರಕ್ತಪ್ರವಾಹಕ್ಕೆ ಟ್ಯೂಬ್ ಚುಚ್ಚುವ ಮೂಲಕ, ನಾಳಗಳಿಗೆ ಆಹಾರ ನೀಡುವ ಮೂಲಕ, ಅತಿಯಾಗಿ ತಿನಿಸುವ ಮೂಲಕ ಅಥವಾ ವಿಷಪೂರಿತ ಇಂಜೆಕ್ಷನ್ ನೀಡುವ ಮೂಲಕ ಶಿಶುಗಳನ್ನು ಕೊಂದರು. ಅಷ್ಟೇ ಅಲ್ಲ, ಮಕ್ಕಳನ್ನು ಕೊಂದ ನಂತರ, ಆಕೆ ಸಹೋದ್ಯೋಗಿಗಳಿಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಇದು ಅಂತಿಮವಾಗಿ ಅವಳ ವಿರುದ್ಧ ನಿಲ್ಲಲು ಸಾಕ್ಷಿಯಾಯಿತು.
ಶಿಶುಗಳ ಸಾವಿನ ನಂತರ ಆಕೆ ತನ್ನ ಸಹೋದ್ಯೋಗಿಗಳನ್ನು ಸಂಪರ್ಕಿಸಿ, ಸಿಬ್ಬಂದಿಗಳಿಂದ ಸಹಾನುಭೂತಿ ಪಡೆಯಲು ಪ್ರಯತ್ನಿಸುತ್ತಿದ್ದಳು ಎಂದು ಸಂದೇಶಗಳಿಂದ ರಿವೀಲ್ ಆಗಿವೆ. ಆಸ್ಪತ್ರೆಯಲ್ಲಿ 12 ತಿಂಗಳ ಕ್ರೂರ ಚಟುವಟಿಕೆಗಳಲ್ಲಿ ಲೆಟ್ಬಿ ತನ್ನ ಸಹೋದ್ಯೋಗಿಗಳಿಗೆ ಕಳುಹಿಸಿದ ಹಲವಾರು ಸಂದೇಶಗಳು ಬೆಳಕಿಗೆ ಬಂದಿವೆ.
ನಾನು ದುಷ್ಟೆ
2018 ರಲ್ಲಿ ಆಕೆಯ ಬಂಧನದ ನಂತರ, ಪೊಲೀಸರು ಆಕೆಯ ಮನೆಯಿಂದ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದರು. ನಾನು ದುಷ್ಟೆ. ಒಳ್ಳೆಯವಳಲ್ಲ, ಆದ ಕಾರಣ ಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೊಂದಿದ್ದೇನೆ. ನಾನು ದುಷ್ಟ ವ್ಯಕ್ತಿ ಎಂದು ಬರೆದುಕೊಂಡಿದ್ದಾಳೆ
ಬದುಕಿದ್ದರೆ... ಮಕ್ಕಳು ಶಾಲೆಗೆ ಹೋಗುತ್ತಿದ್ದರು
ಚೆಸ್ಟರ್‌ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ಸಲಹೆಗಾರ ಡಾ ರವಿ ಜಯರಾಂ, ಶುಕ್ರವಾರ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಿಂದ ನರ್ಸ್ ಲೂಸಿ ಲೆಟ್ಬಿ ತಪ್ಪಿತಸ್ಥರೆಂದು ಸಾಬೀತಾಗುವ ಮೊದಲು ಮಾಜಿ ಸಹೋದ್ಯೋಗಿ ಮತ್ತು ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ಬದುಕಿದ್ದರೆ... ಮಕ್ಕಳು ಶಾಲೆಗೆ ಹೋಗುತ್ತಿದ್ದರು ಎಂದು ನ್ಯಾಯಾಲಯವು ನರ್ಸ್‌ಗೆ ಶಿಕ್ಷೆ ವಿಧಿಸಿದ ನಂತರ ಜಯರಾಂ ಹೇಳಿದರು.
ದೂರಿದ್ದಕ್ಕಾಗಿ ಕ್ಷಮೆ ಕೇಳಬೇಕಾಯಿತು
ಜೂನ್ 2015 ರಲ್ಲಿ ಮೂರು ಮಕ್ಕಳ ಸಾವಿನ ನಂತರ ತಾನು ಮತ್ತು ಇತರ ವೈದ್ಯರು ಕಳವಳ ವ್ಯಕ್ತಪಡಿಸಲು ಪ್ರಾರಂಭಿಸಿದೆವು. ಆದರೆ ಅನುಮಾನ ವ್ಯಕ್ತಪಡಿಸಿದಕ್ಕೆ ಕ್ಷಮೆಯಾಚಿಸಲು ಕೇಳಲಾಯಿತು ಎಂದು ಜೈರಾಮ್ ಹೇಳಿದರು. ಜತೆಗೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತನಗೂ ಬೆದರಿಕೆ ಹಾಕಲಾಗಿತ್ತು ಎಂದು ಜೈರಾಮ್ ಹೇಳಿದರು.
ಅಂತಿಮವಾಗಿ, ಏಪ್ರಿಲ್ 2017 ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (NHS) ಟ್ರಸ್ಟ್ ವೈದ್ಯರಿಗೆ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿತು. ಅದರ ನಂತರ ತನಿಖೆಯನ್ನು ಪ್ರಾರಂಭಿಸಲಾಯಿತು. ಕೊನೆಗೆ ಲೆಟ್ಬಿಯನ್ನು ಬಂಧಿಸಲಾಯಿತು. ಈಗ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಆಗಸ್ಟ್ 21 ರಂದು ಶಿಕ್ಷೆ ಪ್ರಕಟ
33ರ ಹರೆಯದ ಲೆಟ್ಬಿ ಅವರು ಆಸ್ಪತ್ರೆಯಲ್ಲಿ ಏಳು ಶಿಶುಗಳ ಹತ್ಯೆ ಮತ್ತು ಇತರ 10 ಮಂದಿಯ ಕೊಲೆ ಯತ್ನ ಸೇರಿದಂತೆ ಒಟ್ಟು 22 ಆರೋಪಗಳನ್ನು ಎದುರಿಸಿದ್ದರು. ಆಗಸ್ಟ್ 21 ರಂದು ಮ್ಯಾಂಚೆಸ್ಟರ್ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲಾಗುವುದು.