More

    ‘ಪಪ್ಪಾ ನಾನಿನ್ನೂ ಬದುಕಿದ್ದೇನೆ’; ಅಂತ್ಯಸಂಸ್ಕಾರದ ನಂತರ ವಿಡಿಯೋ ಕರೆ ಮಾಡಿದ ಮಗಳು…ಹಾಗಾದರೆ ಆ ಮೃತದೇಹ ಯಾರದ್ದು?

    ಬಿಹಾರ: ಆ ಮನೆಯಲ್ಲಿ ಶೋಕ ಮಡುಗಟ್ಟಿತ್ತು. ಗ್ರಾಮಸ್ಥರು ಶವಯಾತ್ರೆಯಲ್ಲಿ ಪಾಲ್ಗೊಂಡರು. ಕುಟುಂಬಸ್ಥರು ದುಃಖ ವ್ಯಕ್ತಪಡಿಸಿದರು. ತನ್ನ ಚಿಕ್ಕ ಮಗಳಿಗೆ ಬೆಂಕಿಯನ್ನು ಅರ್ಪಿಸಲು ತಂದೆಗೆ ಧೈರ್ಯ ಸಾಕಗಾಲಿಲ್ಲ. ಆಗ ಅಜ್ಜ ಮೊಮ್ಮಗಳಿಗೆ ಕೊನೆಯ ವಿದಾಯ ಹೇಳಬೇಕಾಯಿತು. ನಂತರ ಶ್ರಾದ್ಧ ಕರ್ಮ ತಯಾರಿಯಲ್ಲಿ ತೊಡಗಿದರು. ಅಷ್ಟರಲ್ಲಿ ವಿಡಿಯೋ ಕಾಲ್‌ನಲ್ಲಿ ಧ್ವನಿ ಕೇಳಿಸಿತು…”ಪಾಪಾ ನಾನು ಇನ್ನೂ ಬದುಕಿದ್ದೇನೆ…” ಎಲ್ಲರೂ ಬೆಚ್ಚಿಬಿದ್ದರು.

    ಮಗಳು ಅಂಶು ಕುಮಾರಿಯ ವಿಡಿಯೋ ಕರೆ ಅದಾಗಿತ್ತು. ಅವರ ಕುಟುಂಬ ಸದಸ್ಯರು ಅಂತಿಮ ವಿಧಿವಿಧಾನಗಳನ್ನು ಅದಾಗಲೇ ಮಾಡಿದ್ದರು. ಹಾಗಾದರೆ ಅದು ಅಂಶುಕುಮಾರಿಯ ಶವವಲ್ಲದಿದ್ದರೆ ಯಾರ ಶವ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದರು. ಮೃತ ದೇಹವನ್ನು ಗುರುತಿಸುವಲ್ಲಿ ಹೇಗೆ ತಪ್ಪಾಯಿತು ಎಂದು ಸಂಬಂಧಿಕರು ಚಿಂತಿತರಾದರು. ಇತ್ತ ಮಗಳು ಸತ್ತಿದ್ದಾಳೆಂದು ಅಂತ್ಯಕ್ರಿಯೆ ನಡೆಸಲಾಗಿತ್ತು.

    ಘಟನೆಯ ವಿವರ 
    ಒಂದು ತಿಂಗಳಿನಿಂದ ಮಗಳು ಅಂಶು ಕುಮಾರಿ ಕಾಣೆಯಾಗಿದ್ದಳು. ಮಾಹಿತಿಯ ಪ್ರಕಾರ, ಆಗಸ್ಟ್ 15 ರಂದು ದುಧ್ವಾ ಗ್ರಾಮದ ಕಾಲುವೆಯಲ್ಲಿ ತೇಲುತ್ತಿದ್ದ ಅಪರಿಚಿತ ಹುಡುಗಿಯ ಶವವನ್ನು ಪೊಲೀಸರು ವಶಪಡಿಸಿಕೊಂಡರು. ಮೃತದೇಹದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬಿಶನ್‌ಪುರದ ನಿವಾಸಿ ವಿನೋದ್ ಮಂಡಲ್ ಮೃತ ದೇಹವನ್ನು ತನ್ನ ಮಗಳು ಅಂಶು ಕುಮಾರಿ ಎಂದು ಗುರುತಿಸಿದ್ದಾರೆ. ಅದು ಹಲವು ದಿನಗಳ ಶವವಾಗಿದ್ದರಿಂದ ಆಕೆಯ ಮುಖ ಘೋರವಾಗಿತ್ತು. ಯುವತಿಯ ದೇಹದ ಮೇಲಿದ್ದ ಬಟ್ಟೆ ಮತ್ತು ಬೆರಳುಗಳ ಆಧಾರದ ಮೇಲೆ ಸಂಬಂಧಿಕರು ಮೃತದೇಹವನ್ನು ಗುರುತಿಸಿದ್ದಾರೆ.

    ಯುವಕನನ್ನು ಲವ್ ಮಾಡಿದ್ದ ಅಂಶು ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಮಗಳನ್ನು ತಮ್ಮದೇ ಮಟ್ಟದಲ್ಲಿ ಹುಡುಕಿದರೂ ಆಕೆಯ ಕುರುಹು ಪತ್ತೆಯಾಗಿರಲಿಲ್ಲ. ಹಾಗಾಗಿ ಅಂಶುವನ್ನು ಕೊಂದು ಶವವನ್ನು ಕಾಲುವೆಗೆ ಎಸೆಯಲಾಗಿದೆ ಎಂದು ಸಂಬಂಧಿಕರು ಊಹಿಸಿದ್ದಾರೆ.

    ಅಷ್ಟಕ್ಕೂ ಒಂದು ತಿಂಗಳು ಮಗಳು ಎಲ್ಲಿದ್ದಳು?
    ಅಂಶು ಕುಮಾರಿ ಮನೆಯಿಂದ ನಾಪತ್ತೆಯಾದ ಬಳಿಕ ತನ್ನ ಪ್ರಿಯಕರನನ್ನು ದೇವಸ್ಥಾನದಲ್ಲಿ ಮದುವೆಯಾಗಿ ತನ್ನ ಅತ್ತೆಯೊಂದಿಗೆ ವಾಸವಾಗಿದ್ದಳು. ಇಲ್ಲಿ, ತನ್ನ ಅಂತ್ಯಕ್ರಿಯೆಯ ಸುದ್ದಿ ಮಾಧ್ಯಮದಲ್ಲಿ ಬಂದಾಗ ಅಂಶು ದಿಗ್ಭ್ರಮೆಗೊಳ್ಳುತ್ತಾಳೆ. ಬಂಧುಗಳ ಒಪ್ಪಿಗೆ ಇಲ್ಲದೇ ಮದುವೆಯಾಗಿರುವ ಭಯದಿಂದ ಕೊನೆಗೆ ಶುಕ್ರವಾರ ತನ್ನ ತಾಯಿಯ ಮನೆಗೆ ವಿಡಿಯೋ ಕಾಲ್ ಮಾಡಿ ತಾನು ಬದುಕಿರುವುದಾಗಿ ತಿಳಿಸಿದ್ದಾಳೆ.

    ಹಾಗಾದರೆ ಅದು ಯಾರ ಮೃತ ದೇಹ?
    ಇದೀಗ ಅಂಶು ಬದುಕುಳಿದಿರುವ ಸಾಕ್ಷಿ ಬಯಲಿಗೆ ಬಂದಿದ್ದು, ಅದು ಯಾವ ಬಾಲಕಿಯ ಮೃತದೇಹ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಆ ಮೃತದೇಹ ಗಮನಿಸಿದಾಗ ಅತ್ಯಾಚಾರದ ನಂತರ ಕೊಲೆಯಾಗಿರುವ ಸಾಧ್ಯತೆಯೂ ವ್ಯಕ್ತವಾಗಿದ್ದು, ಪೊಲೀಸರ ಸವಾಲು ಕೂಡ ಹೆಚ್ಚಿದೆ. ಅಪರಿಚಿತ ಮೃತದೇಹದ ಅಂತಿಮ ಸಂಸ್ಕಾರವನ್ನು ಮಾಡಲಾಗಿದೆ. ಮೃತದೇಹದ ಬಳಿ ಸಿಕ್ಕ ಅಗತ್ಯ ವಸ್ತುಗಳು ಹಾಗೂ ಬಟ್ಟೆಗಳು ಇನ್ನೂ ಸುರಕ್ಷಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮೃತದೇಹ ಯಾರದ್ದೆಂದು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

    ತೋಟ ಘಾಟಿಯಲ್ಲಿ ಭೂಕುಸಿತದಿಂದಾಗಿ ರಿಷಿಕೇಶ-ಬದರಿನಾಥ ಹೆದ್ದಾರಿ ಬಂದ್ ; ನಡೆದಾಡಲೂ ಜಾಗವಿಲ್ಲ, ಮಾರ್ಗ ಬದಲಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts