ಬಿಲ್ಕಿಸ್​ ಬಾನೋ ಪ್ರಕರಣ; ಅಪರಾಧಿಗಳ ಕ್ಷಮಾದಾನ ಪ್ರಶ್ನಿಸಿ ಕೇಂದ್ರ-ಗುಜರಾತ್​ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್​

bilkis bano
Published on

ದೆಹಲಿ: ಬಿಲ್ಕಿಸ್​ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಆರೋಪಿಗಳಿಗೆ ಕ್ಷಮಾದಾನ ನೀಡಿರುವುದನ್ನು ಪ್ರಶ್ನಿಸಿ ಗುಜರಾತ್​ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ನೋಟಿಸ್​ ಜಾರಿ ಮಾಡಿದೆ.

ಅಪರಾಧಿಗಳಿಗೆ ಕ್ಷಮಾದಾನ ನೀಡಿರುವ ಬಗ್ಗೆ ಅಗತ್ಯ ಕಡತಗಳ ಸಿದ್ದತೆಯೊಂದಿಗೆ ಏಪ್ರಿಲ್​ 18ರಂದು ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಗುಜರಾತ್ ಹಾಗೂ ಕೇಂದ್ರ​ ಸರ್ಕಾರಕ್ಕೆ ಸೂಚಿಸಿದೆ.

ಅತ್ಯಾಚಾರ ಪ್ರಕರಣದ 11 ಆರೋಪಿಗಳಿಗೆ ಕ್ಷಮಾದಾನ ನೀಡಿರುವುದನ್ನು ಪ್ರಶ್ನಿಸಿ 2022ರಲ್ಲಿ ಬಿಲ್ಕಿಸ್​​ ಬಾನೋ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net