ಶೀಘ್ರದಲ್ಲೇ ಮದುವೆಯಾಗ್ತಾರಾ ಬೃಂದಾವನ ಸಿನಿಮಾದ ಹಿರೋಯಿನ್​ ಕಾರ್ತಿಕಾ…!

dmix
Published on

'ಚಾಲೆಂಜಿಂಗ್ ಸ್ಟಾರ್' ದರ್ಶನ್‌ ನಟನೆಯ 'ಬೃಂದಾವನ' ಸಿನಿಮಾ ನೋಡಿದವರಿಗೆ ನಟಿ ಕಾರ್ತಿಕಾ ನಾಯರ್‌ ಅವರ ಪರಿಚಯ ಇದ್ದೇ ಇರುತ್ತದೆ. ಮೂಲತಃ ಮಲಯಾಳಂ ಕುಟುಂಬದ ಈ ನಟಿ ಮೊದಲು ಬಣ್ಣ ಹಚ್ಚಿದ್ದು ತೆಲುಗು ಸಿನಿಮಾದಲ್ಲಿ. ಆನಂತರ ತಮಿಳಿನ 'ಕೋ' ಚಿತ್ರದಲ್ಲಿ. ಕನ್ನಡ, ಮಲಯಾಳಂನಲ್ಲೂ ಮಿಂಚಿದ್ದಾರೆ.

ಇದೀಗ ಕಾರ್ತಿಕಾ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಆಕೆ ಕೈಗೆ ರಿಂಗ್​​ ಹಾಕಿಕೊಂಡಿರೋದು ಕಂಡು ಬಂದಿದೆ. ಸದ್ಯ ನಟಿ ಕಾರ್ತಿಕಾ ಎಂಗೇಜ್​ಮಾಡಿಕೊಂಡಿದ್ದಾರೆ ಅನ್ನೋದಕ್ಕೆ ಇದೇ ಕಾರಣ. ಕಾರ್ತಿಕಾ ತಮಿಳು ಖ್ಯಾತ ನಟಿ ರಾಧಾ ಅವರ ಹಿರಿಯ ಪುತ್ರಿ, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.


ಉಂಗುರ ಧರಿಸಿ ಭಾವಿ ಪತಿಯನ್ನು ತಬ್ಬಿಕೊಂಡಿರುವ ಚಿತ್ರವನ್ನು ಪೋಸ್ಟ್ ಕಾರ್ತಿಕಾ ಇನ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ನಟಿ ಕಾರ್ತಿಕಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಆದರೆ, ಕಾರ್ತಿಕಾ ತನ್ನ ಪತಿಯ ವಿವರವನ್ನು ಬಹಿರಂಗಪಡಿಸಿಲ್ಲ ಅಲ್ಲದೆ ತಮ್ಮ ಮದುವೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ನಟಿ ಕಾರ್ತಿಕಾ ನಾಯರ್‌ ಬೃಂದಾವನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು.


ಕಾರ್ತಿಕಾಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿ ಹೆಸರು ಮಾಡಿದ್ದ ಹಿರಿಯ ನಟಿ ಅಂಬಿಕಾ, ದೊಡ್ಡಮ್ಮ ಆಗಬೇಕು. ಜೊತೆಗೆ ಕಾರ್ತಿಕಾ ತಂಗಿ ತುಳಸಿ ನಾಯರ್ ಕೂಡ ತಮಿಳಿನ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿಯೇ, ಕಾರ್ತಿಕಾಗೆ ಚಿತ್ರರಂಗಕ್ಕೆ ಎಂಟ್ರಿ ಪಡೆಯುವುದು ಕಷ್ಟವೇನಿಸಲಿಲ್ಲ. ಆದರೆ, ಆರಂಭದಲ್ಲಿ ಸಿಕ್ಕ ಭರ್ಜರಿ ಯಶಸ್ಸು ಕೊನೆಯವರೆಗೂ ಸಿಗಲಿಲ್ಲ.

ಚಿತ್ರರಂಕ್ಕೆ ಕಾರ್ತಿಕಾ ಗುಡ್‌ಬೈ!
17ನೇ ವಯಸ್ಸಿಗೆ ನಾಯಕಿಯಾದ ಕಾರ್ತಿಕಾ, ಕಡಿಮೆ ಸಮಯದಲ್ಲಿ ದಕ್ಷಿಣ ಭಾರತದ ತಮಿಳು, ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಮಿಂಚಿದರು. ಸದ್ಯ ಕಳೆದ 4 ವರ್ಷಗಳಿಂದ ಅವರ ಯಾವ ಸಿನಿಮಾಗಳೂ ತೆರೆಕಂಡಿಲ್ಲ. ಹಿಂದಿಯ 'ಆರಂಭ್‌' ಎಂಬ ಸೀರಿಯಲ್‌ನಲ್ಲೂ ಕಾರ್ತಿಕಾ ಬಣ್ಣ ಹಚ್ಚಿದರು. ಅದು ಕೂಡ ಅಷ್ಟೇನೂ ಜನಪ್ರಿಯತೆ ತಂದುಕೊಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net