

ವಿಯೆಟ್ನಾಂ: ಚಲಿಸುತ್ತಿದ್ದ ಟ್ರಕ್ವೊಂದು ಸೇತುವೆ ಏರುತ್ತಿದ್ದಂತೆ ನದಿಗೆ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸೇತುವೆ ಮುರಿದು ಬಿದ್ದ ಕಾರಣ ಟ್ರಕ್ ಕೂಡ ನದಿಗೆ ಬಿದ್ದಿದೆ. ವಿಯೆಟ್ನಾಂನಲ್ಲಿ ನಡೆದಿರವು ಈ ಘಟನೆಯ ದೃಶ್ಯವನ್ನು ಸೆಪ್ಟೆಂಬರ್ 9ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ಘಟನೆ ಅದೇ ದಿನ ನಡೆದಿದೆ ಎನ್ನಲಾಗಿದೆ.
ವಿಡಿಯೋದಲ್ಲಿ ಬೃಹತ್ ಸೇತುವೆ ಬೃಹತ್ ಪ್ರವಾಹದ ಕಾರಣದಿಂದ ನದಿಗೆ ಬೀಳುತ್ತದೆ. ಅದೇ ಸಮಯಕ್ಕೆ ಟ್ರಕ್ವೊಂದು ಸೇತುವೆ ಏರುತ್ತದೆ. ಸೇತುವೆ ಜತೆಗೆ ಟ್ರಕ್ ಕೂಡ ನದಿ ಪಾಲಾಗುವುದನ್ನು ನೋಡಬಹುದು. ಈ ದೃಶ್ಯವನ್ನು ಕ್ಯಾಮೆರಾದಿಂದ ಸೆರೆಹಿಡಿದಿರುವ ವ್ಯಕ್ತಿಯು ತನ್ನ ಜಾಗದಲ್ಲಿಯೇ ನಿಂತಿದ್ದಾನೆ ಎಂಬುದು ತಿಳಿಯುತ್ತದೆ. ಅನೇಕ ಜನರು ಸೇತುವೆ ಏರದಂತೆ ರಕ್ಷಿಸದಕ್ಕೆ ಕೆಲವರು ದೇವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಇದುವರೆಗೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪೋಸ್ಟ್ ನೋಡಿದವರು ಪ್ರತಿಕ್ರಿಯಿಸುತ್ತಿದ್ದು, ಇದು ವೀಕ್ಷಕರಿಗೆ ಎಡಿಟ್ ಮಾಡಿರುವ ವೀಡಿಯೊವಾಗಿದೆ. ಟ್ರಕ್ ಚಾಲಕನ ಕುಟುಂಬದ ಪರಿಸ್ಥಿತಿ ಏನು. ಆ ಬೈಕ್ನಲ್ಲಿ ಹೋಗುತ್ತಿದ್ದ ಹುಡುಗ ನಿಜವಾಗಿಯೂ ಅದೃಷ್ಟವಂತ, ಅನುಮಾನವೇ ಇಲ್ಲ ದೇವರು ಆ ಹುಡುಗನನ್ನು ಉಳಿಸಿದ್ದಾನೆ. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಸೇತುವೆಗಳು ಬೀಳುತ್ತಿವೆ, ಗುತ್ತಿಗೆದಾರರು ಮಣ್ಣಿನಿಂದ ಸೇತುವೆ ನಿರ್ಮಿಸುತ್ತಿದ್ದಾರೆಂದು ತೋರುತ್ತದೆ. ಇದು ಮಾನವ ನಿರ್ಮಿತ ದುರಂತ ಎಂದು ಪ್ರತಿಕ್ರಿಯಿಸಿದ್ದಾರೆ.
ಸೇತುವೆ ಬೀಳುವುದನ್ನು ನೋಡಿದ ನಂತರ ಬೈಕ್ ಸವಾರನೊಬ್ಬ ತನ್ನ ವೇಗವನ್ನು ಕಡಿಮೆ ಮಾಡಿ ಸ್ವತಃ ನಿಲ್ಲಿಸುವುದನ್ನು ನೋಡಬಹುದು. ಒಂದು ವೇಳೆ ಆತನು ಟ್ರಕ್ ಅನ್ನು ಓವರ್ಟೇಕ್ ಮಾಡಿದ್ದರೆ, ಆತುರದಿಂದ ಬೇಗ ಹೋಗಬೇಕು ಎಂದುಕೊಂಡಿದ್ದರೆ ಅವನ ಸ್ಥಿತಿಯೂ ಟ್ರಕ್ಕಿನ ಸ್ಥಿತಿಯೇ ಆಗತಿತ್ತು ಎಂಬುದಕ್ಕೆ ಅನುಮಾನವೇ ಬೇಡ. ಟ್ರಕ್ನ ಹಿಂದೆ ಇದ್ದವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಟ್ರಕ್ ಚಾಲಕನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಜತೆಗೆ ಸೇತುವೆಯ ಇನ್ನೊಂದು ಬದಿಯಲ್ಲಿ ನಿಂತಿರುವ ಜನರ ಬುದ್ಧಿವಂತಿಕೆಯನ್ನು ಹೊಗಳುತ್ತಾ ಎಂದು ಕಾಮೆಂಟ್ ಮಾಡಿದ್ದಾರೆ.(ಏಜೆನ್ಸೀಸ್)