ಗ್ರಾಮ ಪಂಚಾಯಿತಿಯೇ ಆಯ್ತು ಬೀಗರ ಮನೆ! ಕಚೇರಿಯನ್ನೇ ಬಿಟ್ಟುಕೊಟ್ಟ ಪಿಡಿಒ...

Grama Panchayat office brides family
Published on

ಬಳ್ಳಾರಿ: ಮದುವೆಗೆ ಬಂದ ಬೀಗರ ವಾಸ್ತವ್ಯಕ್ಕೆ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನೇ ಪಿಡಿಒ ಬಿಟ್ಟುಕೊಟ್ಟ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಸಿರಗುಪ್ಪ ತಾಲೂಕಿನ ಬೀರಹಳ್ಳಿಯಲ್ಲಿ ಗುರುವಾರ ಗ್ರಾಮದ ಹನುಮಂತ ಎಂಬುವವರ ಮದುವೆ ನೆರವೇರಿತು. ಬುಧವಾರ ರಾತ್ರಿಯೇ ಹೆಣ್ಣಿನ ಕಡೆಯವರು ಮದುವೆಗೆ ಬಂದಿದ್ದರು. ಅವರಿಗೆಲ್ಲ ಉಳಿದುಕೊಳ್ಳಲು ಗ್ರಾಪಂ ಕಾರ್ಯಾಲಯದಲ್ಲೇ ಗಂಡಿನ ಕಡೆಯವರು ವ್ಯವಸ್ಥೆ ಮಾಡಿಸಿದ್ದರು!

ಹೆಣ್ಣಿನ‌ ಕಡೆಯುವರಿಗೆ ಉಳಿದುಕೊಳ್ಳಲು ಗ್ರಾಪಂ ಕಾರ್ಯಾಲಯವನ್ನೇ ಕೊಡಿಸಿದ ಗಂಡಿನ ಕಡೆಯವರು ಮತ್ತು ಇದಕ್ಕೆ ಅವಕಾಶ ಮಾಡಿಕೊಟ್ಟ ಪಿಡಿಒ ಮಾನಪ್ಪ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಒತ್ತಡಕ್ಕೆ ಮಣಿದು ಗ್ರಾಪಂ ಕಾರ್ಯಾಲಯದಲ್ಲಿ ಮದುವೆ ಹೆಣ್ಣಿನ ಸಂಬಂಧಿಕರಿಗೆ ಉಳಿಯಲು ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಗ್ರಾಮದ ಸರ್ವತೋಮುಖ ಅಭಿವೃದ್ಧಿ ಕೇಂದ್ರವಾಗಿರುವ ಗ್ರಾಪಂ ಕಾರ್ಯಾಲಯವನ್ನು ವೈಯಕ್ತಿಕ ಕಾರ್ಯಕ್ರಮಕ್ಕೆ ಬಳಸಿಕೊಂಡದ್ದು ಸರಿಯಲ್ಲ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net