

ಕರಾಚಿ: ಮದುವೆ ಎನ್ನುವುದು ಎಲ್ಲರಿಗೂ ನೆನಪಿನಲ್ಲಿ ಉಳಿಯುವಂತಹ ದಿನ. ಆ ದಿನಕ್ಕೆ ವಿಶೇಷ ಉಡುಗೆ ಹಾಕಿಕೊಳ್ಳಬೇಕೆಂದು ಎಲ್ಲರೂ ಕನಸು ಕಂಡಿರುತ್ತಾರೆ. ಆದರೆ ಈ ಒಂದು ವಧುವಿನ ಉಡುಗೆ ನೋಡಿದ ಮೇಲೆ ನಿಮ್ಮ ಕನಸು ತೀರಾ ಸಣ್ಣದೆನಿಸಿದರೂ ಎನಸಬಹುದು.
ಪಾಕಿಸ್ತಾನದಲ್ಲಿ ವಧುವೊಬ್ಬಳು ಅವಳ ಮದುವೆಗೆ ಬರೋಬ್ಬರಿ 100ಕೆಜಿ ಅಂದರೆ ಒಂದು ಕ್ವಿಂಟಾಲ್ ತೂಕದ ಲೆಹೆಂಗಾ ತೊಟ್ಟಿದ್ದಳು. ಲೆಹೆಂಗಾದ ಸೆರಗು ಅರ್ಧ ವೇದಿಕೆಗೇ ಹಾಸುವಷ್ಟು ದೊಡ್ಡದಿತ್ತು. ಕೆಂಪು ಬಣ್ಣದ ಬಟ್ಟೆಗೆ ಪೂರ್ತಿಯಾಗಿ ಹ್ಯಾಂಡ್ ಮೇಡ್ ಡಿಸೈನ್ ಮಾಡಿದ್ದ ಲೆಹೆಂಗಾವನ್ನು ನೋಡಿದ ಜನರೆಲ್ಲ ಅಬ್ಬಾ ಎಂದು ಹುಬ್ಬೇರಿಸಿದ್ದಾರೆ.
ಮದುವೆಗೆ ಬಂದವರೆಲ್ಲರಿಗೂ ವಧುವಿನ ಲೆಹೆಂಗಾ ಮೇಲೇ ಕಣ್ಣಿತ್ತಂತೆ. ಅದರ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಕೆಲ ಕಾಲ ಹಿಂದಿನ ವಿಡಿಯೋ ಆಗಿದ್ದು, ಇದೀಗ ಮತ್ತೊಮ್ಮೆ ವೈರಲ್ ಆಗಿದೆ ಎನ್ನಲಾಗಿದೆ. ಅದೇನೇ ಇರಲಿ, ಕ್ವಿಂಟಾಲ್ ತೂಕದ ಲೆಹೆಂಗಾ ಹಾಕಿಕೊಂಡ ವಧು ಅದನ್ನು ಅದೇಗೆ ಮ್ಯಾನೇಜ್ ಮಾಡಿದಳು ಎನ್ನುವುದು ಮಾತ್ರ ಬಹುತೇಕರ ತಲೆಯಲ್ಲಿ ಎಂದೆಂದಿಗೂ ಕಾಡುವ ಪ್ರಶ್ನೆಯಾಗಿಯೇ ಉಳಿದಿದೆ. (ಏಜೆನ್ಸೀಸ್)