ವರದಕ್ಷಿಣೆ ಕೇಳಿದ ಮದುಮಗನನ್ನು ಮರಕ್ಕೆ ಕಟ್ಟಿ ಹಾಕಿದ ವಧುವಿನ ಸಂಬಂಧಿಕರು!

Marriage Symbolic
Published on

ಪ್ರತಾಪ್​ಗಢ: ಉತ್ತರ ಪ್ರದೇಶದ ಪ್ರತಾಪ್‌ಗಢ ಎಂಬಲ್ಲಿ ಮಂಗಳವಾರ, ಜೂನ್ 14 ರಂದು ಮದುವೆ ಸಮಾರಂಭದಲ್ಲಿ ವರ ಮತ್ತು ವಧುವಿನ ಕುಟುಂಬಗಳ ನಡುವೆ ವಾಗ್ವಾದ ನಡೆದ ನಂತರ ಮದುವೆ ಸಮಾರಂಭ ರಣರಂಗವಾಗಿತ್ತು.

ವರ ಅಮರ್‌ಜೀತ್ ವರ್ಮಾ ವಧುವಿನ ಕುಟುಂಬದ ಬಳಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ.

ಮದುವೆಯ 'ಜೈ ಮಾಲಾ' ಸಮಾರಂಭದಲ್ಲಿ, ಅಮರ್‌ಜೀತ್‌ನ ಸ್ನೇಹಿತರು ಅನುಚಿತವಾಗಿ ವರ್ತಿಸಿದ್ದು ವಧು-ವರರ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು. ವರ ಅಮರ್ಜೀತ್ ವಧುವಿನ ಕುಟುಂಬದ ಬಳಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದು ಪರಿಸ್ಥಿತಿಯನ್ನು ವಿಕೋಪಕ್ಕೆ ತಿರುಗಿಸಿತ್ತು.

ಹಲವು ಸುತ್ತಿನ ಮಾತುಕತೆಗಳ ನಂತರವೂ ಎರಡೂ ಕುಟುಂಬಗಳು ಒಪ್ಪಂದಕ್ಕೆ ಬರಲು ವಿಫಲವಾದ ನಂತರ ವರನನ್ನು ವಧುವಿನ ಕಡೆಯಿಂದ ಹಲವಾರು ಗಂಟೆಗಳ ಕಾಲ ಮರಕ್ಕೆ ಕಟ್ಟಿಹಾಕಲಾಗಿತ್ತು. ನಂತರ ಮಾಂಧಾತ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವರನನ್ನು ಬಿಡುಗಡೆ ಮಾಡಿ ವಶಕ್ಕೆ ಪಡೆದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಮಾಂಧಾತ ಠಾಣಾಧಿಕಾರಿ, ‘ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ಇದ್ದಾರೆ. ಆದರೆ ಇನ್ನೂ ರಾಜಿ ಮಾಡಿಕೊಂಡಿಲ್ಲ’ ಎಂದರು.

ಮದುವೆ ಸಮಾರಂಭದ ವ್ಯವಸ್ಥೆಯಲ್ಲಿ ಮಹಿಳೆಯ ಕಡೆಯವರು ಅವರ ವೆಚ್ಚವನ್ನು ಪರಿಹಾರ ರೂಪದಲ್ಲಿ ಪಡೆಯಲು ಎರಡು ಕುಟುಂಬಗಳ ನಡುವೆ ಸಭೆ ಕೂಡ ನಡೆಯುತ್ತಿದೆ ಎಂದು SHO ಮತ್ತಷ್ಟು ಮಾಹಿತಿ ನೀಡಿದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net