

ಇಟಲಿ: ಮದುವೆಗೂ ಮುನ್ನ ಸ್ತನದ ಗಾತ್ರ ದೊಡ್ಡದು ಮಾಡಿಸ ಬೇಕು ಎಂದು ಆಸೆ ಪಟ್ಟ 21ರ ಯುವತಿಯೊಬ್ಬಳು ಸರ್ಜರಿಗೊಳಗಾಗಿ ಸಾವನ್ನಪ್ಪಿರುವ ಘಟನೆ, ಇಟಲಿಯಲ್ಲಿ ನಡೆದಿದೆ.
ಅಲೆಸಿಯಾ ನೆಬೊಸೊ(21) ಮೃತ ಯುವತಿ. ಪ್ರಿಯಕರನೊಂದಿಗೆ ಮದುವೆ ಆಗಲು ಸಿದ್ದಳಾಗಿದ್ದಳು. ಈಕೆ ಮದುವೆಗೆ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳಬೇಕೆಂಬ ಆಸೆಯಿಂದ ಸ್ತನದ ಗಾತ್ರವನ್ನು ದೊಡ್ಡದು ಮಾಡುವ ಸರ್ಜರಿ ಮಾಡಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.
ನಡೆದಿದ್ದೇನು?: ಅಲೆಸಿಯಾ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ ಪ್ಲಾಸ್ಟಿಕ್ ಸರ್ಜರಿ ಮಾಡುವ ಸ್ಪೆಷಲಿಸ್ಟ್ ಕ್ಲಿನಿಕ್‌ಗೆ ಹೋಗಿ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿ ಸೆ. 11 ರಂದು ಅಲೆಸಿಯಾ ನೆಬೊಸೊ ಸರ್ಜರಿಯನ್ನು ಮಾಡಿಸಿಕೊಂಡು ಅದೇ ದಿನ ಡಿಸ್ಚಾರ್ಜ್ ಆಗಿ ಮನೆಗೆ ಹಿಂತಿರುಗಿದ್ದಾಳೆ. ಎರಡು ದಿನ ನಂತರ ಅಲೆಸಿಯಾ ನೆಬೊಸೊಗೆ ಜ್ವರ, ಆಯಾಸ, ಕೆಮ್ಮು, ಕಾಣಿಸಿಕೊಂಡಿದೆ. ಮಗಳ ಆರೋಗ್ಯ ಹದಗೆಟ್ಟಿದ್ದರಿಂದ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೆ.18 ರವರೆಗೆ ಸಂಜೆ ಆಕೆ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿ ಕಿಡ್ನಿ ಸೇರಿ ಕೆಲ ಅಂಗಾಂಗಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ನಂತರ ವೈದ್ಯರು ಆಕೆಗೆ ಸಿಟಿ ಸ್ಕ್ಯಾನ್ ಮಾಡಿದ್ದಾರೆ. ಆಗ ಸಮಸ್ಯೆ ಶ್ವಾಸಕೋಶದಿಂದ ಗೊತ್ತಾಯಿತು. ಇದಾದ ಬಳಿಕ ನಾವು ಆಕೆಯನ್ನು ಐಸಿಯುಗೆ ದಾಖಲಿಸಲಾಯ್ತು. ಆದರೆ ಕೆಲ ಗಂಟೆಗಳ ಬಳಿ ಆಕೆ ಕಾರ್ಡಿಯಾಕ್ ಅರೆಸ್ಟ್ ನಿಂದ ಯುವಮತಿ ಮೃತಪಟ್ಟಳು ಎಂದು ವೈದ್ಯರು ಹೇಳಿದ್ದಾರೆ.