ರಸಗುಲ್ಲಾ ತಿನ್ನದೇ ಆಟವಾಡಿಸಿದ ವರ; ಹಿಗ್ಗಾಮುಗ್ಗಾ ಬಾರಿಸಿದ ವಧು

Viral Video
Published on

ನವದೆಹಲಿ: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಗುರು-ಹಿರಿಯರು ಹೇಳಿರುವುದನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಒಮ್ಮ ಮದುವೆ ನಿಶ್ಚಯಗೊಂಡರೆ ಅದಕ್ಕಾಗಿ ಬಹಳ ತಯಾರಿ ನಡೆಸಬೇಕಾಗುತ್ತದೆ. ಮದುವೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುರುವುದನ್ನು ನಾವು ನೋಡಿದ್ದೇವೆ. ಆದರೆ, ವರ ರಸಗುಲ್ಲಾ ತಿನ್ನಲು ನಿರಾಕರಿಸಿದ ಎಂಬ ಕಾರಣಕ್ಕೆ ವಧು ಆತನ ಕಪಾಳಕ್ಕೆ ಹೊಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಮದುವೆ ಸಮಯದಲ್ಲಿ ನವದಂಪತಿ ಪರಸ್ಪರ ಸಿಹಿ ತಿನಿಸುವ ಸಂಪ್ರದಾಯವಿದೆ. ಇದೀಗ ಸಿಹಿ ತಿನಿಸುವ ವೇಳೆ ವರ ತಿಂದಿಲ್ಲ ಎಂಬ ಕಾರಣಕ್ಕೆ ವಧು ಕೋಪಗೊಂಡಿದ್ದಾಳೆ. ಹೌದು ಮದುಮಗ ರಸಗುಲ್ಲಾ ತಿನ್ನದಿದ್ದಕ್ಕೆ ಕೋಪಗೊಂಡ ಮದುಮಗಳು ಆತನ ಕೆನ್ನೆಗೆ ಬಾರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವರನ ಅವಸ್ಥೆ ಕಂಡು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಗಂಡು ಹೆಣ್ಣು ಹಾರ ಬದಲಾಯಿಸಿಕೊಂಡ ಬಳಿಕ ವರನಿಗೆ ವಧು ಸಿಹಿ ತಿನ್ನಿಸಲು ಮುಂದಾಗುತ್ತಾಳೆ. ಈ ವೇಳೆ ವರ ಆಕೆಯನ್ನು ಆಟವಾಡಿಸುತ್ತಾನೆ. ಇದನ್ನು ಕೆಲಕಾಲ ನೋಡಿದ ವಧು ವರನ ಬಾಯಿಗೆ ರಸಗುಲ್ಲಾವನ್ನು ತುಂಬಿ ಕಪಾಳಕ್ಕೆ ಬಾರಿಸುತ್ತಾಳೆ. ಇದನ್ನೂ ಮೋಡಿದ ಜನ ಏನು ಮಾತನಾಡದೆ ಒಂದು ಕ್ಷಣ ಸುಮ್ಮನಾಗಿ ಬಿಡುತ್ತಾರೆ. ಈ ವಿಡಿಯೋ ಕೊನೆಗೊಂಡಿದ್ದು, ಮುಂದೆನಾಯ್ತು ಎಂಬ ಪ್ರಶ್ನೆ ಮೂಡುತ್ತಿದೆ.

ಕೆಲವರು ಮದುವೆ ಮುರಿದು ಬಿದ್ದರಿಬೇಕು ಎಂದು ಕಮೆಂಟ್​ ಮಾಡಿದರೆ. ಇನ್ನೂ ಕೆಲವರು ಇದು ವೈರಲ್​ ಆಗುವುದಕ್ಕಾಗಿ ಮಾಡಿರುವ ವಿಡಿಯೋ ಎಂದು ಕಮೆಂಟ್​ ಮಾಡಿದ್ದಾರೆ. ಆದರೆ, ಸತ್ಯಾಸತ್ಯತೆ ಇನ್ನೂ ಹೊರಬಾರದ ಕಾರಣ ಏನಾಗಿದೆ ಎಂಬುದು ಯಾರಿಗೂ ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಈ ವಿಡಿಯೋ ವೈರಲ್​ ಆಗಿದ್ದು, ವರನ ಪಾಡು ಕಂಡು ಹಲವರು ಮರುಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net