ಹಸಮಣೆ ಏರಿದಳು, ತಾಳಿಗೆ ಕೊರಳೊಡ್ಡಿದಳು! ಮೊದಲ ರಾತ್ರಿಯೇ ಕಾದಿತ್ತು ಪತಿಗೆ ಭಯಾನಕ ಶಾಕ್​ | Bride

ವಿಜಯವಾಣಿ (2)
Published on

Bride Escape: ಪ್ರಸ್ತುತ ನಡೆಯುತ್ತಿರುವ ವಿಚಿತ್ರ ಘಟನೆಗಳು ಮದುವೆ ಎಂದರೆ ಹೆದರುವಂತೆ ಮಾಡಿಟ್ಟಿದೆ. ನೂರಾರು ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಜೀವನದ ಎರಡನೇ ಭಾಗವನ್ನು ಅದ್ಭುತವಾಗಿ ಕಟ್ಟಿಕೊಳ್ಳೋಣ ಎಂದು ಬಯಸುವ ಮನಸ್ಸುಗಳಿಗೆ ಇಂತಹ ಘಟನೆಗಳು ನಿಜಕ್ಕೂ ಆತಂಕ ಮೂಡಿಸುತ್ತವೆ.

ಇಲ್ಲೊಬ್ಬಳು ಯುವತಿ ತನ್ನ ಮನೆಯವರು ಹೇಳಿದಂತೆ ಮದುವೆಗೆ ಒಪ್ಪಿಕೊಂಡು, ವರನ ಕೈಯಿಂದ ತಾಳಿಯೂ ಕಟ್ಟಿಸಿಕೊಂಡು, ಮೊದಲ ರಾತ್ರಿಯಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ, ಹಣವನ್ನು ಕದ್ದು, ಸ್ಥಳದಿಂದ ಪರಾರಿಯಾದ ಘಟನೆ ಸದ್ಯ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ಬೆರಗಾಗಿಸಿದೆ. ರಾಜಸ್ಥಾನದಲ್ಲಿ ನಡೆದ ಈ ಘಟನೆ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಆರೋಪಿಯ ಸೆರೆಗೆ ಬಲೆ ಬೀಸಲಾಗಿದೆ.

ಮೊದಲ ರಾತ್ರಿಯೇ ಪತಿಗೆ ಶಾಕ್​

ಮದುವೆ ಸಂಭ್ರಮದಲ್ಲಿ ಎಲ್ಲರೊಂದಿಗೆ ಖುಷಿಯಿಂದಲೇ ಮಾತನಾಡುತ್ತಿದ್ದ ವಧು, ವರನ ಜತೆ ಹಸಮಣೆ ಏರಿ, ತಾಳಿಯನ್ನು ಕಟ್ಟಿಸಿಕೊಂಡಳು. ಬಳಿಕ ಮೊದಲ ರಾತ್ರಿಯಲ್ಲಿ ಪತಿಗೆ ಷರತ್ತು ಹಾಕಿದಳು. "ನಾವಿಬ್ಬರು ಈ ರಾತ್ರಿ ಒಟ್ಟಿಗೆ ಸೇರುವಂತಿಲ್ಲ, ಮಲಗುವಂತಿಲ್ಲ. ಇದು ನಮ್ಮ ಪದ್ಧತಿಗಳಿಗೆ ವಿರುದ್ಧವಾಗಿದೆ" ಎಂದು ಹೇಳಿದಳು. ಇದಕ್ಕೆ ಒಪ್ಪಿದ ಪತಿರಾಯ, ಇರಬಹುದೇನೋ ಎಂದುಕೊಂಡು ಬೇರೆ ಕೋಣೆಯಲ್ಲಿ ಮಲಗಿದ್ದಾನೆ. ಇದು ಆಕೆಯ ಕಳ್ಳತನಕ್ಕೆ ಒಂದು ನೆಪ ಎಂಬುದು ಆತನಿಗೆ ತಿಳಿಯಲಿಲ್ಲ.

ಬೆಳಗಿನ ಜಾವ 3 ಗಂಟೆ ಸುಮಾರಿಗೆ ನೀರು ಕುಡಿಯಲು ಎದ್ದ ಗಂಡನಿಗೆ, ಹೆಂಡತಿ ರೂಮ್​ನಲ್ಲಿ ಇಲ್ಲದೆ ಇರುವುದು ಆತಂಕ ಮೂಡಿಸಿದೆ. ಆಕೆ ಮಲಗಿದ್ದ ರೂಮ್​ನ ಸರಿಯಾಗಿ ನೋಡಿದಾಗ ಅಲ್ಮಿರಾದಲ್ಲಿದ್ದ ಚಿನ್ನಾಭರಣ ಮತ್ತು ನೋಟಿನ ಕಂತೆಗಳನ್ನು ಲಪಟಾಯಿಸಿ, ಪರಾರಿಯಾಗಿರುವುದು ಸ್ಪಷ್ಟವಾಗಿದೆ. ಸದ್ಯ ಯುವತಿ ವಿರುದ್ಧ ದೂರ ದಾಖಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net