ಮದುವೆ ನಡೆಯುತ್ತಿರುವಾಗ ಒಮ್ಮೆಲೇ ಬಿದ್ದು, ಶವವಾದಳು ವಧು; ವರ ಏನು ಮಾಡಿದ?

Bride Died 28 June 20
Published on

ಕನೌಜ್​: ಅಂದು ಆಕೆಯ ಮದುವೆ...ಏನೇನೋ ಕನಸುಗಳು. ತುಂಬ ಸುಂದರವಾಗಿ ಅಲಂಕಾರ ಮಾಡಿಕೊಂಡಿದ್ದಳು. ಹಾಗೇ ವಿವಾಹದ ಕಾರ್ಯಕ್ರಮಗಳೂ ಪ್ರಾರಂಭಗೊಂಡವು. ನಗುನಗುತ್ತಲೇ..ಕಣ್ಣಲ್ಲಿ ಸಂತೋಷ ತುಂಬಿಕೊಂಡು ನಾಚುತ್ತ ಕುಳಿತಿದ್ದಳು. ಆದರೆ...

ವಿವಾಹದ ಕಾರ್ಯಕ್ರಮ, ಸಂಪ್ರದಾಯಗಳ ಆಚರಣೆಗಳ ಮಧ್ಯೆಯೇ ಮದುಮಗಳ ಜೀವ ಹೋಯ್ತು...ವರ ಹಿಂದಿರುಗಿದ..!

ಇಂಥದ್ದೊಂದು ದುರ್ಘಟನೆ ನಡೆದಿದ್ದು ಉತ್ತರ ಪ್ರದೇಶದ ಕನೌಜ್​ನ ಭಗತ್​ಪುರ ಗ್ರಾಮದಲ್ಲಿ. ಶುಕ್ರವಾರ ರಾತ್ರಿ ಮದುವೆ ಇತ್ತು. ವರ ಸಂಜಯ್​ ತನ್ನ ಕುಟುಂಬದೊಂದಿಗೆ ವಧುವಿನ ಮನೆಗೆ ಆಗಮಿಸಿದ್ದ. ರಾತ್ರಿ ವಿವಾಹದ ಆಚರಣೆಗಳೆಲ್ಲ ಪ್ರಾರಂಭವಾದವು.

ಮದುಮಗಳು 19 ವರ್ಷದ ವಿನೀತಾ ತುಂಬ ಖುಷಿಯಲ್ಲೇ ಇದ್ದಳು. ಆದರೆ ಒಮ್ಮೆಲೇ ಅಸ್ವಸ್ಥಳಾಗಿ ಬಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯವರು ಯುವತಿಗೆ ಮೊದಲು ಕರೊನಾ ಟೆಸ್ಟ್ ಮಾಡಿಸಿ, ಅದು ನೆಗೆಟಿವ್​ ಬಂದರೆ ಮಾತ್ರ ದಾಖಲಿಸಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ಆರಾಧ್ಯಾಳಿಂದಲೇ ಸಿನಿಮಾ ಕರಿಯರ್ ಹಾಳು; ಪುತ್ರಿ ಬಗ್ಗೆ ಅಭಿಷೇಕ್​ ಬಚ್ಚನ್​ ಹೇಳಿದ್ದೇನು?

ನಂತರ ವಿನೀತಾಳ ತಂದೆ ಆಕೆಯನ್ನು ಕಾನ್ಪುರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಿ ಅವಳ ಆರೋಗ್ಯ ಇನ್ನಷ್ಟು ಹದಗೆಟ್ಟು, ಪ್ರಾಣ ಹೋಗಿತ್ತು. ನಂತರ ವರ ಸಂಜಯ್​ ತನ್ನ ಕುಟುಂಬದೊಂದಿಗೆ ವಾಪಸ್​ ತೆರಳಿದ್ದಾನೆ.

ನಂತರ ಪೊಲೀಸರಿಗೆ ಕರೆ ಮಾಡಿದರು. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುವುದು. ನಂತರ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net