ವಿವಾಹವಾದ ಎರಡನೆ ದಿನವೇ ಆತ್ಮಹತ್ಯೆಗೆ ಶರಣಾದ ವಧು; ತನಿಖೆ ನಡೆಸಿದ ಪೊಲೀಸರು ಹೇಳಿದಿಷ್ಟು.. | Marriage

dk - 2025-02-19T191629.286
Published on

Marriage:ಇತ್ತೀಚಿಗಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಇದಕ್ಕಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದು, ನೂರು ವರ್ಷ ಬಾಳಬೇಕಿದ್ದ ನವ ವಧು ಮರಣದ ಬಾಗಿಲು ತಟ್ಟಿದ್ದಾರೆ. ಈ ಘಟನೆ ತೆಲಂಗಾಣದ ಕಂಬಂ ಮಂಡಲ ದೇವನಗರಂ ಗ್ರಾಮಂನಲ್ಲಿ ಮಂಗಳವಾರ ನಡೆದಿದೆ.

ಪೆದ್ದರವಿಡು ಮಂಡಲದ ಸಿದ್ದಿನಾಯ್ಡು ಪಲ್ಲಿ ಗ್ರಾಮದ ನವ ವಿವಾಹಿತೆ ಸುಶ್ಮಿತಾ ಮೃತೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇನ್ನು ಆಕೆಯ ಆತ್ಮಹತ್ಯೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ, ಮದುವೆ ಬಗ್ಗೆ ನಿರಾಸಕ್ತಿ ಹೊಂದಿದ್ದ ಈಕೆಗೆ ಬಲವಂತದ ಮದುವೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಫೆ.16ರಂದು ಪಕ್ಕದೂರಿನ ನಿವಾಸಿ ವೆಂಕಟೇಶ್​ ಜತೆ ವಿವಾಹವಾಗಿದೆ. ಬಳಿಕ ಫೆ.17ರಂದು ವಧುವಿನ ತವರು ಮನೆಯಲ್ಲಿ ಕಾರ್ಯಕ್ರಮ ನಡೆದಿದೆ. ಮರುದಿನ(ಫೆ.18)ರಂದು ಚಿಕ್ಕಮ್ಮನ ಮನೆಗೆ ತೆರಳಬೇಕು. ಎಲ್ಲವೂ ಸರಿಹೋಗುತ್ತದೆ ಎಂದು ಮನೆವರರೊಂದಿಗೆ ಹೇಳಿಕೊಂಡಿದ್ದಳು. ಆದರೆ, ಮಧ್ಯ್ಹಾನದೊತ್ತಿನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಇನ್ನು ಮದುವೆ ಸಮಾರಂಭ ಸಂಪೂರ್ಣ ಮುಗಿಯುವ ವೇಳೆ ಇಂತದದೊಂದು ದುರಂತ ಆಗಿಹೋಗಿದ್ದು, ಊರರಲ್ಲಿ ಶೋಕ ಮಡುಗಟ್ಟಿದೆ.(ಏಜೇನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net