ಕಲ್ಯಾಣಮಂಟಪಕ್ಕೂ ಕುಡಿದೇ ಬಂದ ವರ, ಮದುವೆಯೇ ಬೇಡ ಎಂದ ವಧು!

Groom
Published on

ಅಸ್ಸಾಂ: ಮದ್ಯಪಾನವೇ ಇಲ್ಲೊಬ್ಬನ ಮದುವೆಗೆ ಮುಳುವಾಗಿದೆ. ಮದುವೆಯ ದಿನವೂ ಮದ್ಯವನ್ನು ಬಿಡದ ವರ ಕುಡಿದುಕೊಂಡೇ ಕಲ್ಯಾಣಮಂಟಪಕ್ಕೆ ಬಂದಿದ್ದರಿಂದ ಮದುವೆಯೇ ನಿಂತುಹೋಗಿದೆ. ಅಸ್ಸಾಂ ರಾಜ್ಯದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಅಸ್ಸಾಮ್​ನ ನಲ್ಬರಿ ಜಿಲ್ಲೆಯ ಬರ್ಖಾನಜನ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಪ್ರಸನ್​ಜಿತ್ ಹಲೊಯ್​ ಮದುವೆವಂಚಿತ ವರ. ಈತ ತನ್ನ ಮದುವೆಯ ದಿನದಂದೂ ಪಾನಮತ್ತನಾಗಿದ್ದು, ಕಲ್ಯಾಣಮಂಟಪಕ್ಕೆ ಅಮಲಿನಲ್ಲೇ ಬಂದಿದ್ದ. ಈತ ಎಷ್ಟರಮಟ್ಟಿಗೆ ಕುಡಿದಿದ್ದ ಎಂದರೆ ಕಲ್ಯಾಣಮಂಟಪದಲ್ಲಿ ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಆಗುತ್ತಿರಲಿಲ್ಲ.

ವರನ ಕಡೆಯ ವ್ಯಕ್ತಿಯೊಬ್ಬ ಆತನಿಗೆ ಆಧಾರ ಒದಗಿಸುತ್ತಿದ್ದರೂ ಆತ ಪಕ್ಕಕ್ಕೆ ವಾಲುತ್ತಿದ್ದ. ವರ ಮಾತ್ರವಲ್ಲದೆ ಆತನ ತಂದೆಯೂ ಪಾನಮತ್ತನಾಗಿ ಬಂದಿದ್ದು, ಆತ ಕಾರಿನಿಂದ ಇಳಿಯಲೂ ಕಷ್ಟ ಪಟ್ಟಿದ್ದ. ಇದನ್ನೆಲ್ಲ ನೋಡಿದ ವಧು ತನಗೆ ಈ ಮದುವೆಯೇ ಬೇಡ ಎಂದಿದ್ದಾಳೆ. ಈ ಸಂಬಂಧವಾಗಿ ವಧುವಿನ ಕಡೆಯವರು ಪೊಲೀಸರಿಗೆ ದೂರು ನೀಡಿದ್ದು, ಅವರು ವಧುಗೆ ರಕ್ಷಣೆ ನೀಡಿ ಅಲ್ಲಿಂದ ತೆರಳಲು ಅನುವು ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net