ಸ್ತನ್ಯಪಾನದಿಂದ ಮಗುವಿನ ಬುದ್ಧಿಶಕ್ತಿ ಚುರುಕು

4sri-2
ಶೃಂಗೇರಿಯ ಸರ್ಕಾರಿ ಅಸ್ಪತ್ರೆಯಲ್ಲಿ ಇನ್ನರ್‌ವ್ಹೀಲ್ ಸಂಸ್ಥೆ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಇನ್ನರ್‌ವ್ಹೀಲ್ ಸಂಸ್ಥೆ ಅಧ್ಯಕ್ಷೆ ಸೌಮ್ಯ ವಿಜಯ್‌ಕುಮಾರ್ ಉದ್ಘಾಟಿಸಿದರು. ಡಾ.ಶ್ರೀನಿವಾಸ್, ಡಾ.ಭುವನೇಶ್ವರಿ ಬಲ್ಲಾಳ್, ರಾಜೇಶ್ವರಿ, ಮಂಜುಳಾ ಇದ್ದರು.
Published on

ಶೃಂಗೇರಿ: ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮನಸಿಕ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಆರು ತಿಂಗಳ ತನಕ ಮಗುವಿಗೆ ಸ್ತನ್ಯಪಾನ ಮಡುವುದು ಅವಶ್ಯ ಎಂದು ಸರ್ಕಾರಿ ಅಸ್ಪತ್ರೆ ಮುಖ್ಯವೈದ್ಯಾಧಿಕಾರಿ ಡಾ.ಶ್ರೀನಿವಾಸ ಹೇಳಿದರು.
ಶುಕ್ರವಾರ ಸರ್ಕಾರಿ ಅಸ್ಪತ್ರೆಯಲ್ಲಿ ಇನ್ನರ್‌ವ್ಹೀಲ್ ಸಂಸ್ಥೆ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಪ್ರಸವದ ಒಂದು ಗಂಟೆ ಒಳಗೆ ಮಗುವಿಗೆ ಹಾಲುಣಿಸಬೇಕು. ಸ್ತನ್ಯಪಾನದಿಂದ ಮಗುವಿನ ಬುದ್ಧಿಶಕ್ತಿ ಚುರುಕಗುತ್ತದೆ ಎಂದರು.
ಹಾಲುಣಿಸುವುದು ನೈಸರ್ಗಿಕ ಕ್ರಿಯೆಯಾಗಿದ್ದು, ಮಗುವಿಗೆ ಹಸಿವು ಉಂಟಾದಾಗ ಸ್ತನ್ಯಪಾನ ಮಾಡಿಸಬೇಕು.ಇದನ್ನು ಡಿಮಾಂಡ್ ಫೀಡ್ ಎಂದು ಕರೆಯಲಾಗುತ್ತದೆ. ಸ್ತನ್ಯಪಾನದ ಕುರಿತು ಪ್ರೋತ್ಸಾಹ ನೀಡಲು ವಿಶ್ವದ 120ಕ್ಕೂ ಹೆಚ್ಚು ದೇಶಗಳಲ್ಲಿ ಅಗಸ್ಟ್ ಮೊದಲವಾರವನ್ನು ಜಾಗತಿಕ ಸ್ತನ್ಯಪಾನ ಸಪ್ತಾಹ ಆಚರಿಸುತ್ತಿದ್ದು ಮಹಿಳೆಯರಿಗೆ ಎದೆಹಾಲಿನ ಮಹತ್ವ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಸಂಸ್ಥೆ ಅಧ್ಯಕ್ಷೆ ಸೌಮ್ಯ ವಿಜಯ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಮಂಜುಳಾ, ಪದಾಧಿಕಾರಿಗಳಾದ ಡಾ.ಭುವನೇಶ್ವರಿ ಬಲ್ಲಾಳ್,ಪೂರ್ಣಿಮಾ ಸಿದ್ಧಪ್ಪ, ರಾಜೇಶ್ವರಿ, ಸುಜಾತಾ ನಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net