Breakup Rumours: 'ಬಿಗ್ ಬಾಸ್ OTT 2' ಮೂಲಕ ಫೇಮಸ್ ಆಗಿರೋ ನಟಿ ಜಿಯಾ ಶಂಕರ್, ತಮ್ಮ ಫಿಯಾನ್ಸೆ ಕಾರನ್ ಧನಕ್ (KD) ಜತೆ ಬ್ರೇಕಪ್ ಆಗಿದೆ ಅನ್ನೋ ಗಾಸಿಪ್‌ಗಳಿಗೆ ಕೊನೆಗೂ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಮಾಡ್ಕೊಂಡಿದ್ದ ಈ ಜೋಡಿ ಮಧ್ಯೆ ಏನೋ ಸರಿ ಇಲ್ಲ, ಬ್ರೇಕಪ್ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಹರಿದಾಡುತ್ತಿತ್ತು.
ಜಿಯಾ ಶಂಕರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ನೋವು, ಮೋಸ ಮತ್ತು ಬೇಸರದ ವಿಷಯಗಳಿದ್ದ ಪೋಸ್ಟ್ ಹಾಗೂ ರೀಲ್ಸ್‌ಗಳನ್ನು ರೀ-ಶೇರ್ ಮಾಡುತ್ತಿದ್ದರು. 'ಕೆಲವು ರಾತ್ರಿಗಳಲ್ಲಿ ನನಗೆ ಸಾಂತ್ವನ ಬೇಡ, ನಡೆದ ಘಟನೆ ಎಷ್ಟು ಕ್ರೂರವಾಗಿತ್ತು ಅನ್ನೋದನ್ನ ಈ ಬ್ರಹ್ಮಾಂಡ ಒಪ್ಪಿಕೊಳ್ಳಬೇಕಷ್ಟೇ' ಅನ್ನೋ ಸಾಲುಗಳನ್ನು ಅವರು ಶೇರ್ ಮಾಡಿದ್ದನ್ನ ನೋಡಿ, ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಅಂತ ಫ್ಯಾನ್ಸ್ ಅನುಮಾನಿಸಲು ಶುರುಮಾಡಿದ್ರು.
ಈ ಎಲ್ಲಾ ಗಾಸಿಪ್‌ಗಳಿಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿದ ಜಿಯಾ, ‘ನನ್ನ ಪರ್ಸನಲ್ ಲೈಫ್ ಬಗ್ಗೆ ಹರಿದಾಡುತ್ತಿರುವ ವದಂತಿಗಳು ನಾನು ಶೇರ್ ಮಾಡಿದ ವಿಷಯಕ್ಕಿಂತ ತೀರಾ ಮುಂಧೋಗಿವೆ. ದಯವಿಟ್ಟು ನನ್ನ ರಿಲೇಷನ್‌ಷಿಪ್ ಬಗ್ಗೆ ಯಾವುದೇ ಗಾಸಿಪ್‌ಗಳನ್ನು ಹಬ್ಬಿಸಬೇಡಿ. ಕೆಲವು ವಿಷಯಗಳು ವೈಯಕ್ತಿಕವಾಗಿರುತ್ತವೆ, ಅದನ್ನ ಎಲ್ಲರೂ ಗೌರವಿಸುತ್ತಿರಾ ಅಂದುಕೊಳ್ಳುವೆ’ ಅಂತ ಬರೆದುಕೊಂಡಿದ್ದಾರೆ.
ಜಿಯಾ ಶಂಕರ್ 2026 ರ ಆಗಸ್ಟ್ 5 ರಂದು ಅಮೆರಿಕ ಮೂಲದ ಉದ್ಯಮಿ ಕಾರನ್ ಧನಕ್ ಜತೆಗಿನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತಗೊಳಿಸಿದ್ದರು. ಕಿರುತೆರೆಯ 'ಮೇರಿ ಹಾನಿಕಾರಕ್ ಬೀವಿ', 'ಪಿಸಾಚಿನಿ' ಧಾರಾವಾಹಿಗಳು ಹಾಗೂ ರಿತೇಶ್ ದೇಶ್‌ಮುಖ್ ಅಭಿನಯದ ಹಿಟ್ ಮರಾಠಿ ಸಿನಿಮಾ 'ವೇದ್' ಮೂಲಕ ಜಿಯಾ ಸಖತ್ ಜನಪ್ರಿಯತೆ ಗಳಿಸಿದ್ದಾರೆ.