ಗಣರಾಜ್ಯೋತ್ಸವ ಸಂಭ್ರಮಕ್ಕೆ ಬ್ರೇಕ್

Republic
Published on

ನವದೆಹಲಿ: ಕರೊನಾ ಸಾಂಕ್ರಾಮಿಕತೆ ಕಾರಣದಿಂದ ಮುಂಜಾಗೃತಾ ಕ್ರಮವಾಗಿ ಮುಂದಿನ ಗಣರಾಜ್ಯ ಕಾರ್ಯಕ್ರಮದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಜನರು ಹೆಚ್ಚು ಸಂಖ್ಯೆಯಲ್ಲಿ ಸೇರುವುದನ್ನು ತಡೆಯುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ.

ಗಣರಾಜ್ಯ ದಿನ ಕಾರ್ಯಕ್ರಮದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪರೇಡ್ ಲಾಲ್ ಚೌಕದಲ್ಲಿ ಸಂಪನ್ನಗೊಳ್ಳುವುದಿಲ್ಲ. ವಿಜಯ್ ಚೌಕದಿಂದ ಆರಂಭವಾಗಿ ನ್ಯಾಷನಲ್ ಸ್ಟೇಡಿಯಂವರೆಗೆ ಪರೇಡ್ ನಡೆಯಲಿದೆ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಾರಿಯ ಮುಖ್ಯ ಅತಿಥಿಯಾಗಿರುತ್ತಾರೆ. ಬ್ರಿಟನ್​ನಲ್ಲಿ ರೂಪಾಂತರಿ ವೈರಸ್ ಹಾವಳಿ ಹೆಚ್ಚಿದ್ದರೂ ಜಾನ್ಸನ್ ಭಾಗ ವಹಿಸುವುದು ನಿಶ್ಚಿತ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

ಬದಲಾವಣೆ ಏನು?

  • ಪರೇಡ್ ದೂರವನ್ನು ಅರ್ಧಕ್ಕಿಂತ ಹೆಚ್ಚು ಕಡಿಮೆ ಮಾಡಲಾಗಿದೆ. ಹಿಂದೆ ಪರೇಡ್ 8.2 ಕಿಲೋ ಮೀಟರ್ ಸಾಗುತ್ತಿತ್ತು. ಈ ಬಾರಿ ಅದು 3.3 ಕಿಲೋ ಮೀಟರ್ ಆಗಲಿದೆ.
  • ಎಲ್ಲ ಮಾರ್ಚಿಂಗ್ ತಂಡಗಳು ಮತ್ತು ಭಾಗವಹಿಸುವವರು ಮಾಸ್ಕ್ ಧರಿಸುವುದು ಕಡ್ಡಾಯ.
  • ತಂಡಗಳ ಗಾತ್ರವನ್ನೂ ಕುಗ್ಗಿಸಲಾಗಿದೆ. ಪ್ರತಿ ತಂಡದಲ್ಲಿ 144ರ ಬದಲು 96 ಜನರು ಇರುತ್ತಾರೆ.
  • ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ ಕೂಡ ತಗ್ಗಿಸಲಾಗಿದೆ.
  • ವೀಕ್ಷಕರ ಸಂಖ್ಯೆಯನ್ನು 1,15,000ದಿಂದ 25,000ಕ್ಕೆ ಇಳಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net