ಲೈವ್ ಶೋನಲ್ಲಿ ಕರೆಂಟ್ ಶಾಕ್ ಹೊಡೆದು ಅಭಿಮಾನಿಗಳ ಎದುರೆ ಪ್ರಾಣ ಬಿಟ್ಟ ಸ್ಟಾರ್ ಸಿಂಗರ್

‘Ayres Sasaki
Published on

ಬ್ರೆಜಿಲಿಯನ್ : ತಮ್ಮ ಗಾಯನದಿಂದ ಲಕ್ಷಾಂತರ ಅಭಿಮಾನಿಗಳನ್ನು ಪುಳಕಗೊಳಿಸುತ್ತಿದ್ದ ಹಾಗೂ ಲೈವ್ ಶೋ ಇದ್ದರೆ, ಅನೇಕ ಅಭಿಮಾನಿಗಳು ಬಹಳ ಉತ್ಸಾಹದಿಂದ ಸೇರಿಸುತ್ತಾ ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆಯುತ್ತಿದ್ದ ಸ್ಟಾರ್ ಸಿಂಗರ್ ಲೈವ್ ಶೋ ನಡೆಸುತ್ತಿದ್ದ ವೇಳೆ ಪ್ರಾಣ ಬಿಟ್ಟಿದ್ದಾರೆ.

ಬ್ರೆಜಿಲಿಯನ್ ರಾಕ್ ಸಿಂಗರ್ ಆಯರೆಸ್ ಸನಕಿ (35) ಮೃತ. ಈತ ಲೈವ್ ಶೋ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬ್ರೆಜಿಲಿಯನ್ ಸಂಗೀತ  ಕಾರ್ಯಕ್ರಮದಲ್ಲಿ ಒಂದು ದೊಡ್ಡ ದುರಂತ ಸಂಭವಿಸಿದೆ.

ಲೈವ್ ಶೋನಲ್ಲಿ ತಮ್ಮ ನೆಚ್ಚಿನ ಗಾಯಕ ನಿಧನರಾದಾಗ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಬ್ರೆಜಿಲ್‌ನ ಸಲಿಯೊನೊ ಪೊಲಿಸ್‌ನಲ್ಲಿರುವ ಸೋಲಾರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ನಾವು ಇದಕ್ಕೆ  ದುಖಿಃತರಾಗಿದ್ದೇವೆ ಅವರ ಕುಟುಂಬವನ್ನು ಯಾವಾಗಲೂ ಬೆಂಬಲಿಸುತ್ತೇವೆ ಮತ್ತು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸಂತಾಪವನ್ನು ಸೂಚಿಸಿದ್ದಾರೆ.

ಆಯರೆಸ್ ಸನಕಿ ಕಳೆದ ವರ್ಷ ವಿವಾಹವಾಗಿದ್ದರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಭಿಮಾನಿ ಲೈವ್ ಶೋಗೆ ಒದ್ದೆಯಾಗಿದ್ದೇಕೆ? ಈ ಬಗ್ಗೆ ಸಾಲಿನೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net