

ಬ್ರೆಸಿಲಿಯಾ: ಕೊವಿಡ್-19 ಸೋಂಕು ಅತಿಯಾಗಿ ಬಾಧಿಸಿದ ದೇಶಗಳಲ್ಲಿ ಒಂದಾದ ಬ್ರಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ಅವರಿಗೂ ಕರೊನಾ ಸೋಂಕು ತಗುಲಿದೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನಲ್ಲಿ ಜೇರ್ ಅವರೇ ತಮಗೆ ವೈರಸ್ ತಗುಲಿದ್ದನ್ನು ತಿಳಿಸಿದ್ದಾರೆ. ಮಾಸ್ಕ್ ಧರಿಸಿ, ಪತ್ರಿಕಾ ವರದಿಗಾರರಿಂದ ದೂರವೇ ನಿಂತು ಮಾತನಾಡಿದ ಜೇರ್ ಅವರು, ನಾನು ಸದ್ಯ ಆರೋಗ್ಯವಾಗಿಯೇ ಇದ್ದೇನೆ. ಸಹಜವಾಗಿಯೇ ಓಡಾಡಬಲ್ಲೆ. ಆದರೆ ವೈದ್ಯಕೀಯ ಸಲಹೆಯನ್ನು ಪಾಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಜೇರ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಸೋಮವಾರ ಅವರು ಕೊವಿಡ್-19 ಟೆಸ್ಟ್ಗೆ ಒಳಗಾಗಿದ್ದರು. ಇಂದು ವರದಿ ಬಂದಿದ್ದು ಸೋಂಕು ದೃಢಪಟ್ಟಿದೆ. ಜೇರ್ ಅವರಿಗೆ ಶ್ವಾಸಕೋಶದ ಸ್ಕ್ಯಾನ್ ಕೂಡ ಮಾಡಲಾಗಿದೆ. ಈ ವೇಳೆ ಶ್ವಾಸಕೋಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬುದು ಗೊತ್ತಾಗಿದೆ ಎಂದು ಬ್ರೆಜಿಲ್ ಮಾಧ್ಯಮಗಳು ವರದಿಯ ಮಾಡಿವೆ. ಇದನ್ನೂ ಓದಿ: ಚೀನಾ ಸೇನೆ ಹಿಂದೆ ಸರಿದರೂ ಕಾಂಗ್ರೆಸ್ಗಿಲ್ಲ ಸಮಾಧಾನ; 2013ರಲ್ಲಿ ಮೋದಿಯವರು ಮಾಡಿದ್ದ ಟ್ವೀಟ್ಗೆ ಈಗ ಉತ್ತರ ಬೇಕಂತೆ…
ಬ್ರೆಜಿಲ್ ಅಧ್ಯಕ್ಷ ಜೇರ್ ಅವರು ಈ ಹಿಂದೆ ಕೊವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಮಾಸ್ಕ್ ಧರಿಸದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಯಾರಿಗೆಂದರೆ ಅವರಿಗೆ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಅವರಿಗೆ ಇದೇ ಕಾರಣಕ್ಕೆ ಸೋಂಕು ತಗುಲಿರಬಹುದು ಎಂದೂ ಹೇಳಲಾಗಿದೆ. ಈ ಮಧ್ಯೆ ಅಧ್ಯಕ್ಷರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲೂ ಸೋಂಕಿನ ಭೀತಿ ಆವರಿಸಿದೆ.ಇದನ್ನೂ ಓದಿ: ಕೇರಳ ‘ಚಿನ್ನ’ದ ಹಗರಣದ ತನಿಖೆಯಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಲಿ…: ಕಾಂಗ್ರೆಸ್ ಮುಖಂಡನ ಒತ್ತಾಯ
ಬ್ರೆಜಿಲ್ನಲ್ಲಿ ಸುಮಾರು 15 ಲಕ್ಷ ಜನರಿಗೆ ಸೋಂಕು ತಗುಲಿದ್ದು, 65 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್)